ಶನಿವಾರ, ಮಾರ್ಚ್ 31, 2012

ಬದುಕಿನದೃಷ್ಠದಾಟವ ಬಲ್ಲವರ್ಯಾರು...??!!

4ನೇ ಭಾಗಕ್ಕಾಗಿ ಈ ಕೊಂಡಿ ಒತ್ತಿ:
http://bisilubeladinagalahudugi.blogspot.in/2012/02/blog-post_05.html


ಈ ರೀತಿ ನಾನಾ ಅಂಶಗಳನ್ನು ಮನಗಂಡ ಶಿವು ಇನ್ನೂ ಸಾಕಷ್ಟು ಗೊಂದಲದಲ್ಲೇ ಇದ್ದನು....!
ಆ ಎಲ್ಲಾ ಗುಣಗಳು ಅವಳಲ್ಲಿದೆ ಅಂತಾ ನಾನು ಅರಿತುಕೊಳ್ಳೋದು ಹೇಗೆ..??
ಎಲ್ಲಾ ಗುಣಗಳಲ್ಲದೇ ಇದ್ರೂ ಒಂದರ್ಧನಾದ್ರೂ ಇದ್ರೆ ಮಿಕ್ಕಿದ್ದನ್ನ ಹೇಳಿಕೊಡಬಹುದು..!
ಮುಖ್ಯವಾಗಿ ಅರಿತು ನಡೆಯುವ ಗುಣ ಅವಳಲ್ಲಿರಬೇಕು,, ಹೇಳಿದನ್ನು ಅರ್ಥೈಸಿಕೊಳ್ಳೋ ಶಕ್ತಿಯಾದ್ರೂ ಅವಳಲ್ಲಿರಬೇಕು..!
ನಿಜವಾಗಿಯೂ ಇಂಥಾ ಹುಡುಗಿ ಇದಾಳಾ..?? ಇದ್ರೂ ನನಗೆ ಸಿಗ್ತಾಳಾ..?? 
ನನ್ನ ಈ ಆಸೆ - ನಿರೀಕ್ಷೆಗಳಂತೆ ಅವಳಿಗೂ ಅವಳ ಹುಡುಗನ ಬಗ್ಗೆ ಕನಸು-ಕಲ್ಪನೆಗಳಿರುವುದಿಲ್ಲವೇ..??
ಅವಳ ನಿರೀಕ್ಷೆಗಳೇನಿರುತ್ತವೋ..?? ದೊಡ್ಡ ಸಿರಿವಂತನನ್ನೋ,, ಹಣವಂತನನ್ನೋ ಮದುವೆಯಾಗೋ ಆಸೆ ಇದ್ರೆ..??
ನನ್ನಂಥ ಬಡಹುಡುಗನಿಗೆ ಆಕೆ ಸಿಗಲು ಸಾಧ್ಯವೇ..??
ಏನೇ ಆಗಲಿ.., ಬೇರೆಯವರ., ಹಾಗೂ ಮನೆಯವರ ಒತ್ತಡಕ್ಕೆ ಕಟ್ಟುಬಿದ್ದು..
ಹುಡುಗಿ ಆಸೆ-ಆಕಾಂಕ್ಷೆಗಳನ್ನು ತಿಳಿದುಕೊಳ್ಳದೇ ಅವಳನ್ನು ವಿವಾಹವಾಗಲು ನಾನು ಸಮ್ಮತಿಸಬಾರದು..
ಹುಡುಗಿ ನೋಡೋಕೆ ಅಂತಾ ಹೋದ್ರೆ ಅವಳ ಬಳಿ ವ್ಯಯಕ್ತಿಕವಾಗಿ ಮಾತಾಡಿ ನನ್ನ ನಿಜ ಪರಿಸ್ಥಿತಿಯನ್ನು ಅವಳಿಗೆ ಮನವರಿಕೆ ಮಾಡಿಸಿ ಅವಳ ಸಂಪೂರ್ಣ ಒಪ್ಪಿಗೆ ಪಡೆದೇ ಮದುವೆಯಾಗಬೇಕು...??
ಆದಷ್ಟು ನನಗೆ ತಕ್ಕಂತ ಬಡಹುಡುಗಿಯನ್ನೇ ಹುಡುಕಬೇಕು,,
ಈ ಸಿರಿವಂತರ ಸಹವಾಸವೇ ನಮಗೆ ಬೇಡ..!
ನಾನೂ ಸಾಕಷ್ಟು ದುಡಿದು ಧನಿಕನಾಗಬೇಕು..! 
ಆದ್ರೆ ಬಡಹುಡುಗಿಯನ್ನೇ ಮದುವೆಯಾಗಬೇಕು...!
ಹೀಗೆ ಹತ್ತು-ಹಲವಾರು ರೀತಿಯಲ್ಲಿ ಯೋಚಿಸಿದ ಶಿವು ಕೊನೆಗೂ ಈ ಒಂದು ನಿರ್ಧಾರಕ್ಕೆ ಬಂದನು..!!


ಕೆಲವು ದಿನಗಳು ಕಳೆದಂತೆ ಇದೇ ವಿಚಾರ ಅವನ ಮನದಾಳದಲ್ಲಿ ಬೇರೂರಿಬಿಟ್ಟಿತು....!
ಆಗಾಗ ಅಕ್ಕ-ಪಕ್ಕ.., ಸುತ್ತ-ಮುತ್ತ ಕಾಣುವ ಹುಡುಗಿಯರನ್ನೊಮ್ಮೆ ಗಮನಿಸುತ್ತಿದ್ದನಾದರೂ.,
ನೋಡಿದವರು ಏನಾಂದರೋ ಏನೋ ಅಂಥಾ ಹುಡುಗಿಯರ ಕಡೆ ಜಾಸ್ತಿ ಗಮನಕೊಡದೇ..
ತಾನಾಯಿತು.., ತನ್ನ ಕೆಲಸವಾಯಿತು ಎಂದು ತನ್ನಪಾಡಿಗೆ ತಾನಿರುತ್ತಿದ್ದನು...!!


ಒಂದು ದಿನ ಬೆಳಿಗ್ಗೆ 09.00ಕ್ಕೆಲ್ಲ್ಲತನ್ನ ಪಾಡಿಗೆ ತಾನು ವ್ಯಾಪರಕ್ಕೆ ಬಂದು ತಾನು ಕೂಡುವ ಜಾಗವನ್ನು
ಸ್ವಚ್ಚಗೊಳಿಸಿ ತನ್ನ ಎಲ್ಲ ಸಲಕರಣಿಗಳನ್ನು ಜೋಡಿಸಿ ತಾನು ಕೂಡುವ ಕುರ್ಚಿ ಮೇಲೆ ಕುಳಿತು ಅಂದಿನ ದಿನ ಸಂಜೆ ಡ್ರಾ ಆಗಲಿರುವ ಟಿಕೇಟುಗಳನ್ನೆಲ್ಲಾ ಲೆಕ್ಕ ಮಾಡಿ ಹಲಗೆಯ ಮೊಳೆಗಳಿಗೆ ಹಾಕಿ,, "ಅಬ್ಬಾ..!! ಇನ್ನೂ ಇಷ್ಟೊಂದು ಟಿಕೇಟುಗಳಿವೆ ಇವತ್ತು ಇವಿಷ್ಟು ಖಾಲಿಯಾಗಲೇಬೇಕು.. ಉಳಿದುಬಿಟ್ರೆ ನಷ್ಟವಾಗಿಬಿಡುತ್ತೆ" ಅಂತಾ ಅಂದುಕೊಳ್ಳುತ್ತಾ... ಹಾಗೆ ರಸ್ತೆ ಆಚೆ ಎದುರುಗಡೆ ಇರುವ ಬೇವಿನಮರದ ಕಡೆ ದೃಷ್ಠಿ ನೆಟ್ಟನು..
ಆ ಬೇವಿನ ಮರದ ಎಲೆಗಳ ಮಧ್ಯದಲ್ಲಿಂದ ಆಗ ತಾನೇ ಬೆಳಗಿನ ಸೂರ್ಯ ರಶ್ಮಿಗಳು ಇವನ ಮುಖ ಹಾಗು ಅಂಗಡಿಯಮೇಲೆ ಬೀಳುತ್ತಿದ್ದವು.,
ಹಾಗೇ ಸ್ವಲ್ಪ ಉಲ್ಲಾಸಿತನಾಗಿ 'ಇಷ್ಟೊಂದು ಲಾಟರಿಗಳನ್ನು ಮಾರಾಟ ಮಾಡ್ತೀನಿ... ಒಮ್ಮೊಮ್ಮೆ ಮಾರಟವಾಗದೇ ಉಳಿದು ನಷ್ಟನೂ ಆಗುತ್ತೆ.. ಅಕಸ್ಮಾತ್ ಉಳಿದ ಟಿಕೇಟುಗಳಲ್ಲೇ ಒಂದೇ ಒಂದು ನನಗೆ ಬಂಪರ್ ಬಹುಮಾನ ಬಂದು ಬಿಟ್ರೇ ಎಷ್ಟೊಂದು ಚೆನ್ನಾಗಿರುತ್ತಲ್ಲಾ..??  ಆಗ ನಾನೂ ಶ್ರೀಮಂತನಾಗ್ತೀನಿ.. ನಾನು ಬಯಸಿದ್ದೆಲ್ಲಾ ಸಿಗುತ್ತಾಲ್ವಾ..??'
ಎಂದು ಹಗಲುಗನಸು ಕಾಣತೊಡಗಿದನು.. ಇದ್ದಕ್ಕಿದ್ದಂತೆ ಆ ಕನಸಿಗೆ ಭಂಗ ಬಂದಂತೆ ಏನೋ ಬಂದು ಇವನನ್ನು ಸೆಳೆದಂತಾಯಿತು.. ಆದರೂ ತನ್ನ ಬೇವಿನಮರದ ದೃಷ್ಠಿಯನ್ನು ಬದಲಾಯಿಸಲೇ ಇಲ್ಲ.. ಯಾಕೋ ಮನಸಿನಲ್ಲಿ ಕಳವಳವಾದಂತಾಯ್ತು... ನಾನೇನೋ ನನಗೆ ಸಂಬಂಧಪಟ್ಟಿದ್ದನ್ನ ಕಳೆದುಕೊಳ್ತಾ ಇದೀನಲ್ಲಾ ಅಂತಾ ಅನಿಸೋಕೆ ಶುರುವಾಯ್ತು,,, ವಿಚಲಿತನಾಗಿ ಆ ಕಡೆ.. ಈ ಕಡೆ ನೋಡತೊಡಗಿದನು... ಏನೂ ಕಾಣಲಿಲ್ಲ..! ಯಾಕೀಗಾಯಿತೆಂದು ಯೋಚಿಸಲು ಹಾಗೆ 'ಈ ಕಡೆಯಿಂದ ಯಾರೋ ನನ್ನ ಮುಂದೆ ಹಾದು ಹೋದ ಹಾಗಾಯ್ತಲ್ವೇ...??!! ಅದ್ಕೇ ಹೀಗಾಯ್ತೇನೋ' ಅಂದುಕೊಂಡು ಸುಮ್ಮನಾದನು...!!


ಲಾಟರಿ ಏಜೆಂಟ್ ರ ಬದುಕು ಹೇಗಪ್ಪಾ ಅಂತದ್ರೆ ಇವರು ಕೊಂಡು ತಂದ ಟಿಕೇಟುಗಳನ್ನೆಲ್ಲಾ  ಡ್ರಾ ಆಗೋ ಸಮಯದೊಳಗೆ ಇವರು ಮಾರಾಟ ಮಾಡಲೇಬೇಕು ಒಂದು ವೇಳೆ ಮಾರಾಟವಾಗದೇ ಉಳಿದುಕೊಂಡ್ರೆ ಅದು ಇವರಿಗೇ,,ಹಾಗೇ.., ಉಳಿದಿದ್ದರಲ್ಲೇ ಅದರ ನಷ್ಟ ಭರಿಸುವಷ್ಟು ಬಹುಮಾನ ಬಂದ್ರೆ ಒಳ್ಳೇದು ಇಲ್ಲಾ ಅಂದ್ರೆ ಇವರು ದುಡಿದದ್ದೆನ್ನೆಲ್ಲಾ ಅದ್ಕೇ ಕೊಡಬೇಕಾಗಿ ಬರ್ತಿತ್ತು.. ಒಮ್ಮೊಮ್ಮೆ ಯಾವ ಲಾಭನೂ ಇಲ್ಲದೇ ಇವರೇ ಮುಖ್ಯ ಏಜೆಂಟ್ ಗಳಿಗೆ ಬಾಕಿದಾರರಾಗಬೇಕಾದ ಪ್ರಸಂಗವಿರುತ್ತಿತ್ತು. ಅದ್ಕೇ ಕೆಲವೊಮ್ಮೆ ಯಾರಿಗಾದ್ರೂ ಖಾಯಂ ಗಿರಾಕಿಗಳಿಗೆ ಉದ್ರಿ(ಸಾಲ) ಕೊಟ್ಟು ದುಡ್ಡನ್ನು ಮತ್ತ್ಯಾವಗಲೋ ಪಡೆಯಬೇಕಾಗ್ತಿತ್ತು.. ಅದ್ಕೇ ಎಷ್ಟು ಮಾರಾಟವಾಗುತ್ತೋ ಅಷ್ಟೇ ಲಾಟರಿಗಳನ್ನು ಇವರು ಖರೀದಿ ಮಾಡಬೇಕಿತ್ತು...
ವ್ಯಾಪಾರ ಹೀಗೆ ಇರುತ್ತೆ ಅಂತಾ ಹೇಳೋಕಾಗುತ್ತಾ,..??? 
ಒಮ್ಮೊಮ್ಮೆ ಭರ್ಜರಿ ವ್ಯಾಪಾರವಾದ್ರೆ,, ಒಮ್ಮೊಮ್ಮೆ ಏನೂ ಆಗೋದೆ ಇಲ್ಲ,,, 
ನಿಯಮಿತವಾಗಿ ಬಹುಮಾನಗಳು ಬರ್ತಾ ಇದ್ರೆ ಖರೀದಿ ಮಾಡೋರಿಗೂ ಬೇಸರವಿರೋದಿಲ್ಲ... 
ಆಗ ವ್ಯಾಪಾರನೂ ಸುಗಮವಾಗಿ ನಡೆಯುತ್ತೆ... ಆದ್ರೆ.., 
ಅದೃಷ್ಠ ಯಾರಪ್ಪನ ಮನೆ ಸ್ವತ್ತೂ ಅಲ್ಲ ನೋಡಿ..?? ಅದು ತನಗಿಷ್ಠ ಬಂದವರಿಗೆ ಒಲಿಯುತ್ತೆ...! 
ಅದರಲ್ಲೂ ಕರ್ನಾಟಕ ಸರ್ಕಾರದ ಲಾಟರಿಗಳಲ್ಲಿ ಬಹುಮಾನ ಲಭಿಸುವ ಅವಕಾಶಗಳು ತುಂಬಾನೇ ಕಡಿಮೆ ಇರ್ತಾ ಇತ್ತು. ಬೇರೆ ಬೇರೆ ರಾಜ್ಯ ಸರ್ಕಾರದ ಲಾಟರಿಗಳಲ್ಲಿ ಗ್ರಾಹಕರಿಗೆ ಬಹುಮಾನ ಲಭಿಸುವ ಅವಕಾಶಗಳು ಯತೇಚ್ಚವಾಗಿರುತ್ತಿತ್ತು. ಅಲ್ಲದೇ, ಬಹುಮಾನಿತ ಟಿಕೇಟನ್ನು ಮಾರಾಟ ಮಾಡುವ ಏಜೆಂಟರಿಗೂ ಅತಿ ಹೆಚ್ಚು ಬೋನಸ್ ನ್ನು ಅನ್ಯ ರಾಜ್ಯ ಸರ್ಕಾರದ ಲಾಟರಿಗಳಲ್ಲಿ ಘೋಷಣೆಯಾಗಿರುತ್ತಿತ್ತು.! 
ಹೀಗಾಗಿ, ಗ್ರಾಹಕರಾದಿಯಾಗಿ ಏಜೆಂಟ್, ಸ್ಟಾಕಿಸ್ಟ್, ಮೇನ್ ಸ್ಟಾಕಿಸ್ಟ್ ಗಳೆಲ್ಲಾ ಅನ್ಯರಾಜ್ಯಸರ್ಕಾರದ ಲಾಟರಿಗಳನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. 
ಹೀಗೆ ಅನ್ಯ ರಾಜ್ಯಸರ್ಕಾರದ ಲಾಟರಿಗಳ ಕೃಪೆಯಿಂದಾಗಿ ಲಾಟರಿ ಏಜೆಂಟರ ಬದುಕು ತಕ್ಕ ಮಟ್ಟಿಗೆ ಆರಕ್ಕೇರದೆ ಮೂರಕ್ಕಿಳಿಯದೆ ಸರಳ ಕಷ್ಟದಿಂದ ಜೀವನ ಸಾಗಿತ್ತು...!
ಒಟ್ಟಿನಲ್ಲಿ ಇವರ ಬದುಕೂ ಒಂಥರಾ ದುಸ್ತರವೇ..! 
'ಅದೃಷ್ಠ ಮತ್ತು ದೇವರ ಕೃಪೆ' ಸದಾ ಇವರಮೇಲಿರಬೇಕು...!


ಇಂತಿಪ್ಪ ಬದುಕಿನ ಒಡೆಯ ನಮ್ಮ ಶಿವು.. ಇಂಥಾ ಕಷ್ಟ ಸಂದರ್ಭದಲ್ಲೂ ಇವನ ವ್ಯಾಪಾರವು ಯಾವುದೇ ಕುಂದಿಲ್ಲದೇ ನಡೆಯುತ್ತಿತ್ತು, ಕಾರಣ ಇವನು ತನ್ನ ವ್ಯಾಪರಕ್ಕಾಗಿ ಆಯ್ದುಕೊಂಡಿದ್ದ ಜಾಗ ಹಾಗಿತ್ತು. 
ನಾಲ್ಕು ದಾರಿ ಕೂಡುವ ವೃತ್ತದ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕ್ ಬಳಿಯ ಒಂದು ಮರದ ಕೆಳಗೆ ಪೂರ್ವಾಭಿಮುಖವಾಗಿ ಅಂಗಡಿ ಇಟ್ಟಿದ್ದನು. 
ಎಡ ಭಾಗದಲ್ಲಿ ಕೂಗಳತೆ ದೂರದಲ್ಲಿ ಊರಿನ ಪ್ರಮುಖ ತರಕಾರಿ ಮಾರುಕಟ್ಟೆ ಇತ್ತು. 
ಎದುರುಗಡೆ ರಸ್ತೆ, ರಸ್ತೆ ಆಚೆಬದಿಯಲ್ಲಿ ಮುಸ್ಲೀಂ ಧರ್ಮದವರ ಬೇವಿನಮರದ ದರ್ಗಾ ಕಟ್ಟೆ, 
ಅದರ ಪಕ್ಕದಲ್ಲೇ ಹಳೇ ಬಸ್ ನಿಲ್ದಾಣ., ಇಲ್ಲಿ ವ್ಯಾನ್.. ಆಟೋ,, ಎಲ್ಲಾ ನಿಂತು ಹೋಗ್ತಾ ಇದ್ದವು.
ಹಿಂದೆ ಪೆಟ್ರೋಲ್ ಬಂಕ್ ಆಫೀಸ್, 
ಬಲಗಡೆ ರಸ್ತೆಗೆ ಹೊಂದಿಕೊಂಡಂತಿರುವ ಪೆಟ್ರೋಲ್ ಬಂಕ್, 
ಹಾಗೆ.. ಅದೇ ಮಾರ್ಗವಾಗಿ ಹಿಂದೆ ಬಂದರೆ ಒಂದು 'ಹನುಮಾನ್ ಚಿತ್ರಮಂದಿರ'.
ಹೀಗೆ ಒಂದಿಲ್ಲೊಂದು ರೀತಿಯಲ್ಲಿ ವಿವಿಧ ಜನರಿಗೂ ಸರ್ವ ಅವಶ್ಯಕತೆಗಳನ್ನು ಪೂರೈಸುವ ತಾಣವಾಗಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಜಾಗವದಾಗಿತ್ತು, 
ಹೀಗಾಗಿ ಸರಳ ವ್ಯವಹಾರಕ್ಕೇನೂ ತೊಂದರೆ ಇರಲಿಲ್ಲ. ಆದ್ರೂ..  
ಟಿಕೇಟುಗಳು ಉಳಿಯುವಂಥ ಸಮಯ ಬಂದರೆ ನಾಚಿಕೆಪಟ್ಟುಕೊಳದೇ ಕೂಗಿ ಕೂಗಿ ಮಾರಟಮಾಡುವದರಲ್ಲಿ ಶಿವು ನಿಸ್ಸೀಮನಾಗಿದ್ದನು.
 "ಬೇಗ ಬನ್ನಿ,, ಬೇಗ ಡ್ರಾ,, ಬೇಗ ಬೇಗ ಬಹುಮಾನ.. ಒಳ್ಳೆ ನಂಬರ್ ಟಿಕೇಟ್ ಇದೆ ಈಗಲೇ ಕೊಳ್ಳಿ , 
ಅದೃಷ್ಟ ಯಾರಿಗುಂಟ್ಟು ಯಾರಿಗಿಲ್ಲ ಬೇಗ ಬನ್ನಿ ಬೇಗ ಬನ್ನಿ ಟಿಕೇಟು ಖಾಲಿಯಾಗಿಬಿಡುತ್ತೆ,," 
"ಇವತ್ತೆ ಡ್ರಾ.., ನಾಳೆನೇ ದುಡ್ಡು" ಎಂದು ಜನರನ್ನು ಸೆಳೆಯುತ್ತಿದ್ದನು.
ಅದಾಗ್ಯೂ ಕೆಲವೊಮ್ಮೆ ಉಳಿದೂ ಬಿಡ್ತಾ ಇತ್ತು, 
ಮುಂದೆ ದೇವರ ಮೇಲೆ ಭಾರ ಹಾಕಿ ಹೋಗೋದು, 
ಕೆಲವೊಮ್ಮೆ ನಷ್ಟ.., ಕೆಲವೊಮ್ಮೆ ಲಾಭ ಬರ್ತಾ ಇತ್ತು..! 
ಹೀಗೆ ಏಳು ಬೀಳುಗಳ ನಡುವೆ ಶಿವುನ ಜೀವನ ಸಾಗುತ್ತಿತ್ತು......!!


ನ್ನ ಪ್ರತಿನಿತ್ಯದ ಬೆಳಗಿನ ಕಾಯಕವೇ ಅಂದಿನ ಡ್ರಾದ ಟಿಕೇಟುಗಳೆಷ್ಟಿವೆ..?? ಹೇಗೆ ಮಾರಾಟ ಮಾಡೋದು..?? ನಿನ್ನೆಯ ಫಲಿತಾಂಶದಲ್ಲಿ ಎಷ್ಟೆಷ್ಟು ಬಹುಮಾನ ಯಾರ್ಯಾರಿಗೆ ಬಂದಿದೆ,, ಅದನ್ನೆಲ್ಲಾ ಜನರಿಗೆ ತಿಳಿಸಿ ಮುಂದಿನ ಡ್ರಾದ ಟಿಕೇಟುಗಳನ್ನೇಗೆ ಮಾರಾಟ ಮಾಡಬೇಕೆಂದು ಅಲೋಚಿಸುವದಾಗಿತ್ತು.
ಅದಕ್ಕೆ ಎದುರುಗಡೆಯ ಬೇವಿನ ಮರವೇ ಸಾಕ್ಷಿಯಾಗ್ತಾ ಇತ್ತು.
ಯಾಕಂದ್ರೆ ಆ ಮರ ನೋಡ್ತಾನೇ ಯೋಚಿಸಬೇಕಾಗ್ತಾ ಇತ್ತಲ್ವಾ..? 
ಹೀಗೆ ಯೋಚಿಸುತ್ತಿರುವಾಗಲೇ ಕಳೆದ ಹದಿನೈದು ದಿನದಲ್ಲಿ ಮೂರ್ನಾಲ್ಕು ಬಾರಿ ಇವನ ಚಿತ್ತಚಾಂಚಲ್ಯವಾಗಿತ್ತು...!!! ನೋಡಿದರೆ ಏನೊಂದೂ.. ಯಾರನ್ನೂ ಕಾಣುತ್ತಿರಲಿಲ್ಲ..!


ಒಂದು ದಿನ ರಾತ್ರಿ ಇದರ ಬಗ್ಗೆ ಆಲೋಚಿಸಿದನು ಯಾಕೆ ಹೀಗಾಗ್ತ ಇದೆ.. ಯಾವಗ್ಲೂ ಹೀಗೆ ಆಗಿದ್ದಿಲ್ಲ... ಅದೇನೋ ಮಿಸ್ ಮಾಡ್ಕೋತಾ ಇದೀನಲ್ಲಾ..?? ಅದೇನು ನನ್ನ ಸೆಳೀತಾ ಇರೋದು ಅನ್ಕೊಂಡು ಇರಲಿ.. ನಾಳೆ ಅದೇನು ಆಗುತ್ತೋ ನೋಡೋಣ ಪೂರ್ತಿ ಎಚ್ಚರವಾಗೇ ಇರ್ತೀನಿ ಎಲ್ಲಾ ಕಡೆ ಗಮನಿಸ್ತಾನೇ ಇರ್ತೀನಿ.. ಅದೇನೂ ಅಂತಾ ನಾಳೆ ನನ್ನ ಮನಸಿನ ತಲ್ಲಣಕ್ಕೆ ಪರಿಹಾರ ಕಂಡುಹಿಡಿಯಲೇಬೇಕೆಂದು ತೀರ್ಮಾನಿಸಿ ನಿದ್ರೆಗೆ ಶರಣಾದನು..!!
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ: 
Google Images ನಿಂದ)
ರುದಿನ ಬೆಳಿಗ್ಗೆ ಎಂದಿನಂತೆ ಎದ್ದು ಅಂಗಡಿಗೆ ಬಂದು ಸಿದ್ಧಮಾಡಿ ಕುಳಿತುಕೊಂಡನು.
ತುಂಬಾ ಎಚ್ಚರವಾಗೇ ಇದ್ದನು...
ವಿಶೇಷವಾದಂತದೇನೂ ಕಾಣಲಿಲ್ಲ ಹೀಗೆ ಮತ್ತೆ ೩-೪ ದಿನಗಳು ಕಳೆದವು ಐದನೇ ದಿನ ಮತ್ತದೇ ಚಿತ್ತಚಾಂಚಲ್ಯವಾದಂತೆ ಭಾಸವಾಗಿ ತಕ್ಷಣವೇ ಕತ್ತನ್ನು ಎಡಭಾಗಕ್ಕೆ ತಿರುಗಿಸಿದನು...
ಓಹೋ... ನನ್ನ ಮನಸಿನ ಚಂಚಲತೆಗೆ ಇದಾ ಕಾರಣ.....??? 
ಅಂತಾ ಹಾಗೇ ತದೇಕ ಚಿತ್ತದಿಂದ ಗಮನಿಸತೊಡಗಿದನು..!!


ಮುಂದುವರಿಯುವುದು............

ನಿಮ್ಮ ಟೀಕೆ-ಟಿಪ್ಪಣೆಯ ಅಬಿಪ್ರಾಯ(Comment)ಗಳನ್ನು ಓದಿ ತಿದ್ದಿಕೊಳ್ಳುವ ಅದೃಷ್ಠ ನನ್ನದಾಗಿರಲಿ, ಮರೆಯದೇ ನಿಮ್ಮ ಅಭಿಪ್ರಾಯವನ್ನು(Comment) ಬರೆಯಿರಿ...!!


ನಿಮ್ಮವ ♥ ♥
ಸವಿನೆನಪುಗಳು..!!

11 ಕಾಮೆಂಟ್‌ಗಳು:

 1. ಅರ್ರೆರ್ರೆ.....
  ಒಳ್ಳೆ ಪಾಯಿಂಟ್ ಗೆ ನಿಲ್ಲಿಸಿಬಿಟ್ರಲ್ಲ ಗೌಡ್ರೇ... ಚಿತ್ತ ಚಾಂಚಲ್ಯ ಗೊಳಿಸಿದ 'ಅದು' ಏನು ಅಂತ ತಿಳಿಯೋಕೆ ಮುಂದಿನ ಕಂತಿನ ತನಕ ಕಾಯಿರಿ ಎಂದು ನಿಲ್ಲಿಸಿ ಬಿಟ್ಟಿರಾ?ಕುತೂಹಲ ಇದೆ.... ಇದು ಬಿಸಿಲು ಬೆಳೆದಿಂಗಳ ಹುಡುಗಿಯ ಎಂಟ್ರಿ ಆಗಿರಬಹುದಾ?! ಗೊತ್ತಿಲ್ಲ...!
  ಲಾಟರಿ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ.. ಈ ಕಂತಿನ ಮುಖಾಂತರ ಒಂದು ಹೊಸ ವಿಷಯದ ಅರಿವು ನನಗಾಯಿತು... ಹಾಗೆಯೇ ಶಿವು ಪಾತ್ರದ ಕಲ್ಪನೆ ಚೆನ್ನಾಗಿ ಮೂಡಿ ಬರುತ್ತಿದೆ....ಪ್ರಸ್ತುತ ಯುವಕರು ಯಾವ ಮಾದರಿಯಲ್ಲಿ ಯೋಚಿಸಬೇಕೆಂಬುದನ್ನು ಸೂಕ್ಷ್ಮವಾಗಿ ತಿಳಿಸುವ ಜಾಣ್ಮೆ ನಿಮ್ಮದು...ಚೆನ್ನಾಗಿದೆ ...ಶುಭವಾಗಲಿ...

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಕುತೂಹಲವಿರಲಿ ಎಂದೇ ಸರಿಯಾದ ಪಾಯಿಂಟ್ ಗೆ ನಿಲ್ಲಿಸಿದ್ದು...!
   ಮುಂದಿನ ಭಾಗದಲ್ಲಿ ಅದೇನು ಅಂಥಾ ಗೊತ್ತಾಗುತ್ತೆ ಬಿಡಿ...,:)
   ಚೆಂದದ ವಿಮರ್ಶೆಗೆ ಧನ್ಯವಾದಗಳು...!

   ಅಳಿಸಿ
 2. ಪ್ರತ್ಯುತ್ತರಗಳು
  1. ಹ್ಮ್ಮ್ ನಿಜಾ ರೀ ಕುಮಾರ್ ಒಳ್ಳೆ ಪಾಯಿಂಟ್ ಗೆ ಕಥೆ ನಿಂತಿದೆ,,
   ಪ್ರತಿಕ್ರಿಯೆಗೆ ಧನ್ಯವಾದ...!

   ಅಳಿಸಿ
 3. ಬದುಕಿನದೃಷ್ಠದಾಟವ ಬಲ್ಲವರ್ಯಾರು...??!!
  Istela Yochne mado huduga Shiva na jeevana yenagabahudu gowdre.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹ್ಹ ಹ್ಹ ಹ್ಹ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ...!
   ಅದೇನಾಗಬಹುದೆಂಬ ಊಹೆಯನ್ನೂ ನಾನು ಮಾಡಿಲ್ಲ...!
   ನೋಡೋಣ ಕಾಲಾಯಾ ತಸ್ಮೈ ನಮಃ.!!

   ಅಳಿಸಿ
 4. ಪ್ರತ್ಯುತ್ತರಗಳು
  1. ನಿಮ್ಮ ಕೂತೂಹಲ ಹೀಗೆ ಇರಲಿ ಮೋಹನ್..!
   ಮುಂದಿನ ಭಾಗ ಏನಾಗುತ್ತೆ ಎಂದು ಮುಂದಿನ ಭಾಗದಲ್ಲೇ ಓದುವಿರಂತೆ..!
   ಪ್ರತಿಕ್ರಿಯೆಗೆ ಧಯವಾದಗಳು..! :)

   ಅಳಿಸಿ
  2. ಕ್ಷಮಿಸಿ...!!
   ಪ್ರತಿಕ್ರಿಯೆಗೆ ಧನ್ಯವಾದಗಳು..! :)
   ಎಂದಾಗಬೇಕಿತ್ತು..! :) ತಿದ್ದಿ ಓದಿಕೊಳ್ಳಿ..! :)

   ಅಳಿಸಿ
 5. ಗೌಡ್ರೇ ತಮ್ಮ ಈ ಬ್ಲಾಗು ನನಗೆ ಹಲವು ಬರವಣಿಗೆ ಸಾಧ್ಯತೆಗಳನ್ನು ತೆರೆದಿಟ್ಟಿತು. ಓದಿಗೆ ಸುಲಭವಾಗಿ ದಕ್ಕುವ ಮತ್ತು ಓದುಗಾಣ ಮನಸ್ಸಿನಾಳಕ್ಕೆ ಇಳಿಯುವ ಪರಿಯ ಪಾಠವೂ ನನಗಾಯಿತು.

  ಪ್ರತ್ಯುತ್ತರಅಳಿಸಿ