ಭಾನುವಾರ, ಫೆಬ್ರವರಿ 5, 2012

ಆ ರತಿಯೇ..... ಧರೆಗಿಳಿದಂತೆ....! ♥

3ನೇ ಭಾಗಕ್ಕಾಗಿ ಈ ಕೊಂಡಿ ಒತ್ತಿ:
http://bisilubeladinagalahudugi.blogspot.in/2011/12/blog-post_17.html


ತಾನು ನೆನಪಿಸಿಕೊಂಡ ಕಥೆಯ ಗುಂಗಿನಲ್ಲೇ ಇದ್ದ ಶಿವು..
ಅದರ ಬಗ್ಗೆ ಅವಲೋಕಿಸತೊಡಗಿದನು.,
ನಾನೂ ಆ ರೀತಿ ಮಾಡಲು ಸಾಧ್ಯವೇ..?? 
ನಾನೂ ಒಂದು ಸೇರು ಭತ್ತನಾ ಹೆಗಲಿಗೇರಿಸಿಕೊಂಡು ಹೊರಟು ಬಿಡ್ಲಾ..?
ಒಂದು ವೇಳೆ ಯಾರಾದ್ರೂ ನನ್ನ ಹಾಗೆ ಆ ಕಥೆನಾ ಓದಿಕೊಂಡಿದ್ದು ಅದೇ ಥರ ಮಾಡಿಬಿಟ್ರೆ..??
ನಾನು ಸರಿಯಾಗಿ ಪರೀಕ್ಷೆ ಮಾಡಿದ ಹಾಗೆ ಆಗುತ್ತಾ..?? 
ಆ ಕಥೆ ಓದ್ದೋರು ಯಾರು ಬೇಕಾದ್ರೂ ಆ ರೀತಿ ಆಡುಗೆ ಮಾಡಬಹುದಲ್ವಾ ..!??
ಆದ್ರೂ ಈ ಇಪ್ಪತ್ತೊಂದನೇ ಶತಮಾನದಲ್ಲಿ ಇದು ಸಾಧ್ಯಾನಾ..?? 
ಈಗಿನ ದಿನಸಿ ದರವೇನು..?? ಆಗಿನ ದರಗಳೇನು..??
ಅದೂ ಅಲ್ಲದೇ ಅವನೇನೋ ರೈತ, ಅದ್ಕೇ ಆ ರೀತಿ ಪರೀಕ್ಷೆ ಮಾಡಿದ..
ನಾನೇನು ರೈತಾನೇ..?? ನಾನೊಬ್ಬ ವ್ಯಾಪಾರಿ ನನಗೆ ಸರಿ ಹೊಂದೋ ಹುಡುಗಿನಾ ನಾನು ಆರಿಸಿಕೊಳ್ಳಬೇಕು..
ಮತ್ತೆ.. ನಾನೂ ನಗೆಪಾಟಲಿಗೀಡಾಗಬೇಕಾದೀತು ಎಂದೆನಿಸಿ ಆ ಕಥೆಯ ಸಹವಾಸವೇ ಬೇಡ ಬೇರೇನಾದ್ರೂ ಮಾರ್ಗೋಪಾಯಗಳನ್ನ ಹುಡುಕಿದರಾಯ್ತು ಎಂದುಕೊಂಡು ಆ ಕಥೆಯ ವಿಚಾರಕ್ಕೆ ಪೂರ್ಣ ವಿರಾಮವನಿಟ್ಟುಬಿಟ್ಟನು.


ದೊಂದು ದಿನ ಶಿವು ಎಂದಿನಂತೆ ಬೆಳಗಾಗೆದ್ದು ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತು  ದಿನ ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿರುವಾಗ TV ಯಲ್ಲಿ ಬೆಳಗಿನ ಚಲನಚಿತ್ರ ಶುರುವಾಗುತ್ತಿತ್ತು.. ಸಮಯ ಬೆಳಿಗ್ಗೆ 7 ಘಂಟೆ.  
ಒಳಗಡೆ ಅಪ್ಪ ಅಮ್ಮ ಮಾತನಾಡುವ ಸದ್ದು ಕೇಳಿಸುತ್ತಿತ್ತು..
"ಯಾವ ಸಿನಿಮಾ ಹಾಕಿದಾರೇ" ಅಂತ ಕೇಳ್ತಾ ಇದ್ರು ಅಪ್ಪ..
'ಗಂಡೊಂದು ಹೆಣ್ಣಾರು'ಹಾಕಿದಾರೆ ನೋಡ್ರಿ."ಅಂದ್ರು ಅಮ್ಮ. ಆಗಲೇ ಶಿವು ಕಿವಿಗಳು ಚುರುಕಾದವು.,
"ಓಹೋ.. ರಾಜ್ ಕುಮಾರ್ ಪಿಚ್ಚರ್ ಅದು..ನಾನು ಆಗಲೇ ನೋಡಿದ್ದೇನೆ..ಬಹಳ ಚೆನ್ನಾಗಿದೆ" ಅಂದ್ರು ಅಪ್ಪ..
ಶಿವುಗೆ ಆಗಲೇ ಮನದಲ್ಲಿ ಗೊಂದಲ ಶುರುವಾಗಿತ್ತು.. ಇದೆಂಥಾ ಸಿನಿಮಾನಪ್ಪಾ ಒಂದು ಗಂಡಿಗೆ ಆರು ಹೆಣ್ಣಾ..??! ಅದೂ ಅಣ್ಣಾವ್ರದೂ,,!! ಹೇಗಿದೆ ನೋಡೋಣ ಅಂತಾ ಒಳಗಡೆ ಬಂದು ತಂದೆಯನ್ನ ಕೇಳಿದನು.. 
"ಏನಿದು ಗಂಡೊಂದು ಹೆಣ್ಣಾರು ಅಂದ್ರೆ.. ಒಂದು ಗಂಡಿಗೆ ಆರು ಹೆಣ್ಣಾ..??" ಕುತೂಹಲ ಭರಿತನಾಗಿ ಕೇಳ್ತಾನೆ..
ಅದ್ಕೇ ಅವರ ತಂದೆ ಜೋರಾಗಿ ನಕ್ಕು.. "ಲೇ,, ಗಂಡೊಂದು ಹೆಣ್ಣಾರು ಅಂದ್ರೆ ಒಂದು ಗಂಡು ಆರು ಹೆಣ್ಣಲ್ಲಲ್ಲೇ,, . ಒಂದು ಗಂಡಿಗೆ ಆರು ಗುಣಗಳುಳ್ಳ ಹೆಣ್ಣು ಸಿಗಬೇಕು ಅಂತಾ ಅರ್ಥ" ಅಂದ್ರು..
ಶಿವು ಇನ್ನೂ ಕುತೂಹಲದಿಂದ "ಹೌದಾ...!!?? ಯಾವ್ಯಾವ ಗುಣಗಳಯ್ಯಾ..??" ಅಂತಾ ಕೇಳ್ತಾನೆ.
ಅಲ್ಲಿ ಸಿನಿಮಾದಲ್ಲಿ ಹೇಳ್ತಾರೆ ನೋಡು.., ಬರ್ಕೋ ಹೋಗು ಅಂತಾ ಹೇಳಿದ್ರು.
ಸರಿ ಅಂತಾ ಇವನೂ ನೋಡೋಣ ಸ್ವಲ್ಪ ಹೊತ್ತು.., ಅಂಗಡಿಗೆ ಹೋಗೋಕೆ ಇನ್ನೂ ಸಮಯ ಇದೆಯಲ್ಲ ಅನ್ಕೊಂಡು.. ಪತ್ರಿಕೆ ಮಡಚಿಟ್ಟು ನೋಡಲು ಕುಳಿತನು..


Over To Film Seen.....


ಗ ತಾನೇ ಹೆಸರು ಮುಗಿದು ಚಿತ್ರ ಶುರುವಾಗಿತ್ತು,,
ರಾಜಣ್ಣ ಹಾಗೇ ಕಾರು ಓಡಿಸಿಕೊಂಡು ಬರ್ತಾ ಇರ್ತಾರೆ..
ದಾರಿ ಮಧ್ಯದಲ್ಲಿ ಕಾರಿಗೆ ಏನೋ ತೊಂದರೆಯಾಗಿ ನಿಂತು ಬಿಡುತ್ತೆ..
ಏನಾಗಿದೆ ಅಂತಾ ನೋಡಿ ಒಂದು ಕ್ಯಾನ್ ನಲ್ಲಿ ನೀರು ತರೋಕೆ ಅಂತಾ ಒಂದು ಮನೆ ಹತ್ರ ಬರ್ತಾರೆ..
ಇನ್ನೇನು ನೀರು ಕೇಳೋಣ ಅಂತಾ ಮನೆ ಮುಂದೆ ಬರ್ತಾರೆ ಆಗ್ಲೇ,, ತುಂಬಾ ತುಂಬಾ ವಯಸ್ಸಾದ ೯೦ ರ ಆಸು ಪಾಸಿನ ಅಜ್ಜ... ಅಜ್ಜಿ ಬಹಳ ಸಂತೋಷದಿಂದ ಕೇಕೆ ಹಾಕಿ ನಗ್ತಾ ಇರ್ತಾರೆ.. ಇದನ್ನು ನೋಡಿ ಅವಕ್ಕಾದ ರಾಜಣ್ಣ.. ಹಾಗೇ ಮರೆನಲ್ಲಿ ನಿಂತ್ಕೊಂಡು ಅವರ ಆನಂದವನ್ನು ಗಮನಿಸ್ತಾ ಇರ್ತಾರೆ... ಅವರು ಹಾಗೇ ಮಾತಾಡ್ತಾ ಇರಬೇಕಾದ್ರೆ ಯಾವುದೋ ಮಾತಿಗೆ ರಾಜಣ್ಣನಿಗೂ ಜೋರಾಗಿ ನಗು ಬಂದು ಹಾಗೇ.. ನಕ್ಕು ಬಿಡ್ತಾರೆ... 
ಆಗಲೇ ಆ ಅಜ್ಜ ಅಜ್ಜಿಗೆ ಗೊತ್ತಾಗಿದ್ದು ಯಾರೋ ಹೊರಗೆ ನಿಂತು ನಮ್ಮನ್ನ ಗಮನಿಸ್ತಾ ಇದಾರೆ ಅಂತಾ.. 
"ಯಾರದು ಬನ್ನಿ ಒಳಕ್ಕೆ" ಅಂತಾರೆ...
ಅಣ್ಣಾವ್ರು ಹಾಗೇ ನಗು ನಗುತ್ತಾ ಬಂದು... "ಏನಿಲ್ಲ ತಾತ,, ಕಾರಿಗೆ ಸ್ವಲ್ಪ ನೀರ್ ಬೇಕಾಗಿತ್ತು.. ಇಸ್ಕೊಂಡು ಹೋಗೋಣ ಅಂತಾ ಬಂದೆ ನಿಮ್ಮ ಖುಷಿ ನೋಡಿ ಅಲ್ಲೇ ನಿಂತ ಬಿಟ್ಟೇ...! :)
"ಅದು ಸರಿ,, ನೀವು ಈ  ವಯಸಿನಲ್ಲೂ ಇಷ್ಟೊಂದು ಸಂತೋಷವಾಗಿದ್ದೀರಲ್ಲಾ..? ಇದು ಹೇಗೆ..??
ನನ್ನ ಹತ್ರ ಹಣ ಆಸ್ತಿ ಎಲ್ಲಾ ಇದೆ.. ಆದ್ರೆ, ನೆಮ್ಮದಿ ಮಾತ್ರ ಇಲ್ಲ.. ನಿಮ್ಮ ಹಾಗೆ ಆನಂದ ವಾಗಿರೋದು ಹೇಗೆ ನಾನೂ" ಅಂತಾ ಕೇಳ್ತಾರೆ...
ಅದ್ಕೇ ತಾತ,, "ನೋಡಪ್ಪಾ..!!! ನೀನು ಸಂತೋಷವಾಗಿರಬೇಕೂ ಅಂದ್ರೆ ಒಂದು ಮದ್ವೇ ಮಾಡ್ಕೋ.. ಅದು ತನ್ನಿಂದ ತಾನೇ ಬರುತ್ತೆ" ಅಂತಾರೆ.... 
ಹೌದಾ..??!! ಮದ್ವೇನಲ್ಲಿ ಅಷ್ಟೊಂದು ಸಂತಸವಿದೆಯಾ ಸರಿ ನಾನು  ಮೊದ್ಲು ಹೋಗಿ ನಾಳೆನೇ ಮದ್ವೇ ಆಗ್ತೀನಿ" ಅಂತಾರೆ...
ಅದ್ಕೇ ತಾತ.. "ಇರಪ್ಪ.. ಮದುವೆ ಅಂದ್ರೆ.. ಯಾವುದ್ಯಾವುದೋ ಹುಡುಗಿನ ಮದ್ವೇ ಆದ್ರೆ ಆಗಲ್ಲ.. ಅವಳಿಗೆ ಆರು ಗುಣಗಳಿರಬೇಕು ಅಂತಾ ಹುಡುಗಿನಾ ನೀನ್ ಮದ್ವೇ ಆದ್ರೆ ನೀನು ಬಯಸೋ ಸುಖ,, ನೆಮ್ಮದಿ,, ಸಿಗುತ್ತೆ" ಅಂತಾರೆ.. 
"ಆ ಆರು ಗುಣಗಳು ಯಾವುದ್ಯಾವುದು ಅಂತಾ ಹೇಳಿ.."
"ಹೇಳ್ತೀನಿ ಬರ್ಕೋಳಪ್ಪಾ" 
ಪೆನ್ನು ಪೇಪರ್ ತಗೊಂಡು ಬರ್ಕೊಳ್ಳೋಕೆ ಶುರು ಮಾಡ್ತಾರೆ...
ತಾತಾ ಹೇಳ್ತಾರೆ.. 
1) "ರೂಪೇಚ ಲಕ್ಷ್ಮಿ... ನೋಡೋದಕ್ಕೆ ಲಕ್ಷ್ಮಿಯ ಹಾಗೆ ಮುಖಕಳೆ ಹೊಂದಿರಬೇಕು.."
2) "ಕಾರ್ಯೇಷು ದಾಸಿ.... ನಿನ್ನ ಮನೆ ಕೆಲಸ ಕಾರ್ಯಗಳಾನ್ನು ಸೇವಕಿಯಂತೆ ನಿಷ್ಟೇಯಿಂದ ನಿರ್ವಹಿಸಬೇಕು.."
3)"ಕರಣೇಷು ಮಂತ್ರಿ.... ಗೊಂದಲದ ಸಮಯದಲ್ಲಿ ಮಂತ್ರಿಯ ಹಾಗೆ ಸಲಹೆಗಳನ್ನು ನೀಡುವಂತಿರಬೇಕು.."
4)"ಭೋಜ್ಯೇಷು ಮಾತ... ತಾಯಿಯಷ್ಟೇ ಪ್ರೀತಿಯಿಂದ,, ಮಮತೆಯಿಂದ ಅಡುಗೆ ಮತ್ತು ಊಟ ಬಡಿಸುವವಳಾಗಿರಬೇಕು.."
5)"ಕ್ಷಮಯಾ ಧರಿತ್ರಿ... ಕೆಲವೊಂದು ಕಠಿಣ ಸಂದರ್ಭದಲ್ಲಿ ಭೂತಾಯಿಯ ಹಾಗೇ ಸಹನೆ ಕಳೆದುಕೊಳ್ಳದೇ.. ತಪ್ಪು ನಡೆದಿದ್ದರೂ.. ಕ್ಷಮಾ ಗುಣವನೊಂದಿರಬೇಕು.."
6)"ಶಯನೇಷು ವೇಶ್ಯೆ.... ಇದನ್ನ ನೀನೇ ಹೇಳೇ" ಅಂತಾರೇ ತಾತ...
ಅದ್ಕೇ ಅಜ್ಜಿ.. "ಹೇ,, ಹೋಗ್ರಿ,, ನೀವೇ ಹೇಳ್ರಿ" ಅಂತಾರೆ ಅಜ್ಜಿ...
ಆಗ ಅಣ್ಣಾವ್ರೂ.. "ಹ್ಹ ಹ್ಹ ಅರ್ಥ ಆಯ್ತು.. ಅರ್ಥ ಆಯ್ತು.. ಅವರಿಗ್ಯಾಕೆ ಸುಮ್ನೇ ತೊಂದ್ರೆ ನನಗರ್ಥವಾಯಿತು ಬಿಡಿ.". ಅಂತಾ ಅಂದು.. "ಅಲ್ಲಾ ತಾತ.. ನೀವು ಯಾವುದೋ ಕಾಲದ ಹುಡುಗಿ ಬಗ್ಗೆ ಹೇಳ್ತಾ ಇದೀರಿ.. ಈ ೨೦ನೇ  ಶತಮಾನದಲ್ಲಿ ಇಂಥಾ ಹುಡ್ಗೀರ್ ಸಿಗ್ತಾರ..?? ಇದು ಆಗೋ ಮಾತಲ್ಲ ಬಿಡಿ" ಅಂತಾರೆ..
"ಯಾಕ್ ಆಗೋದಿಲ್ಲಪ್ಪಾ.. ಎಲ್ಲಾ ಕಾಲದಲ್ಲೂ ಇರ್ತಾರೆ.. ಹುಡುಕೋ ತಾಳ್ಮೆ ಇಅರಬೇಕು ಅಷ್ಟೇ.. ಹುಡುಕು.. ಸಿಕ್ಕೇ ಸಿಗ್ತಾಳೆ ಅಂತಾ ಹುಡುಗಿನೇ ನೀನು ಮದುವೆ ಆಗು" ಅಂತಾರೆ ತಾತ..
"ಸರಿ ತಾತ ನೀವು ಹೇಳಿದ ಈ ಗುಣ ಗಳಿರೋ ಹುಡುಗಿ ಸಿಗ್ಲಿ ಅಂತಾ ಇಬ್ರೂ ಆಶೀರ್ವಾದ ಮಾಡಿ.. ಅಂತಾ ಹುಡುಗಿನೇ ಹುಡುಕಿ ಮದ್ವೇ ಆಗಿ ನಿಮ್ಮ ಆಶೀರ್ವಾದ ಪಡೇಯೋಕೆ ಬರ್ತೀನಿ.." ಅಂತಾ ಹೇಳಿ ಅವರ ಕಡೆಯಿಂದ ನೀರು ಪಡೆದುಕೊಂಡು ಹೊರಟರು ನಮ್ಮ ರಾಜಣ್ಣ..


ಮುಂದೆ ಸಾಕಷ್ಟು ಪರೀಕ್ಷೆ ಮಾಡಿ.. ಹಲವು ತೊಂದರೆಗಳನ್ನ ಎದುರಿಸಿ ಅಂತಾ ಹುಡುಗಿನೇ ಮದ್ವೇ ಆಗಿ ಅಜ್ಜ ಅಜ್ಜಿ ಹತ್ರ ಆಶೀರ್ವಾದ ಪಡೆಯೋಕೆ ಗಂಡ ಹೆಂಡತಿ ಇಬ್ರೂ ಬರ್ತಾರೆ,, ಆದ್ರೆ,, ಅದಾಗಲೇ ಅವರು ಕಾಲವಾಗಿಬಿಟ್ಟಿರುತ್ತಾರೆ.. (ಪೂರ್ತಿ ಕಥೆನಾ ಸಿನಿಮಾದಲ್ಲಿ ನೋಡಿ..)


(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ: 
Google Images ನಿಂದ)
ದೇಕ ಚಿತ್ತದಿಂದ ಎಲ್ಲಾ ಮರೆತು ಸಿನಿಮಾ ನೋಡುತ್ತಾ ಕುಳಿತಿದ್ದ  ಶಿವು ಸಮಯ ನೋಡ್ತಾನೇ ಆಗಲೇ 10ಘಂಟೆ..!!!
ಅಯ್ಯೋ...!! ಎಷ್ಟೊತ್ತಗಿಬಿಡ್ತಾಲ್ಲ ಅನ್ಕೊಂಡು ತಡಾಬಡಾಯಿಸಿ ಎದ್ದು..  20 ನಿಮಿಷದಲ್ಲಿ ತಯಾರಾಗಿ.. ತಿಂಡಿ ತಿನ್ನದೇ ಆತುರಾತುರವಾಗಿ ವ್ಯಾಪರಕ್ಕೆ ಹೊರಡಲನುವಾದನು...
ಮುಗ್ಧಮನಸಿನ ಶಿವು ಮನಸಲ್ಲೇ ಆರು ಗುಣಗಳ ಹುಡುಗಿ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಾ ಜೀವನ ಬಂಡಿ ಸಾಗಿಸಲು ಸೈಕಲ್ ಮೇಲೆ ಸಾಗುತ್ತಿದ್ದನು... ಆಗಲೇ ಮನದ ಮೂಲೆಯಿಂದ ಎಚ್ಚರಿಕೆಯ ಧ್ವನಿಯಂತೆ ತೆಳುವಾಗಿ ಕೇಳಿಸುತ್ತಿತ್ತು...


 "ಆರು ಗುಣಗಳ ಆ ರತಿ.,
 ಮಾಡಿದರೆ ನಿನಗಾರತಿ.,
 ಬರುವುದೊಳ್ಳೆ ಕೀರುತಿ.
 ಕೇಳುವಳಾಗೊಂದು ಮೂಗುತಿ.,
 ತರದಿದ್ದರೇ ನೀನವಳ ಕೈಯಿಂದ..
 ಜಾರುತಿ., ಜಾರುತಿ., ಜಾರುತಿ..!" :))ಮುಂದುವರಿಯುವುದು.........

ನಿಮ್ಮ ಟೀಕೆ-ಟಿಪ್ಪಣೆಯ ಅಬಿಪ್ರಾಯ(Comment)ಹಾಕ್ತೀರಲ್ಲಾ..? ಮರೀಬೇಡಿ...!

ನಿಮ್ಮವ ♥ ♥ 
ಸವಿನೆನಪುಗಳು..!

4 ಕಾಮೆಂಟ್‌ಗಳು:

 1. ಗಂಡೊಂದು ಹೆಣ್ಣಾರು ಶಿವುಗೆ ಒಳ್ಳೆ ಪಾಯಿಂಟ್ ನೇ ಕೊಟ್ಟು ಬಿಡ್ತು..
  ನನಗೂ ಡೌಟ್ ಇದೆ ಅಷ್ಟೆಲ್ಲ ಗುಣಗಳನ್ನ ಎಲ್ಲಿಂದ ಹುಡುಕೋದು, ಸಿಗ್ತಾಳ ಅಂತ..! ನನ್ ಕಡೆ ಹುಡುಗಿ ಇದ್ರೆ ತಿಳಿಸ್ತೇನೆ...ನೀವು ಕೂಡ ಪ್ರಯತ್ನ ಪಡಿ...

  ಬಹುಶಃ ಇದು ಕತೆಗೆ ಒಳ್ಳೆಯೇ ಟರ್ನಿಂಗ್ ಪಾಯಿಂಟ್ ಆಗತ್ತೆ ಅಂತ ನನ್ನ ಊಹೆ...
  ಚೆನ್ನಾಗಿದೆ....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹ್ಹ ಹ್ಹ ಹ್ಹ ಸಿಗ್ತಾಳೋ..? ಇಲ್ವೋ... ಹುಡುಕೋಣ..
   ನಿಮ್ ಕಡೇ ಇದ್ರೆ ತಿಳಿಸಿ. ಹಾಗೇ ಸ್ವಲ್ಪ ದೊಡ್ಡ ಪಾರ್ಟಿನೇ ಹುಡುಕಿ..
   ಶಿವುನಾ ಕಷ್ಟ-ಕಾರ್ಪಣ್ಯಗಳೆಲ್ಲಾ ಕಳೆದುಹೋಗಿಬಿಡಬೇಕು..,
   ಅಂತಾ ಪಾರ್ಟಿನೇ ಹುಡುಕಿಕೊಟ್ಟುಬಿಡಿ... :)))

   ಕಥೆನಾ ತುಂಬಾನೇ ಚೆನ್ನಾಗಿ ಗ್ರಹಿಸ್ತಾ ಇದೀರಾ..
   ಇದೇ ಟರ್ನಿಂಗ್ ಪಾಯಿಂಟ್ ಅಂತಾನೂ ಹೇಳ್ತಾ ಇದೀರಿ...
   ನೋಡುವಾ ಇನ್ನೂ ಅದೇನೇನು ಯೋಚಿಸ್ತಾನೋ ಶಿವು...
   ಪ್ರತಿಕ್ರಿಯೆಗೆ ಧನ್ಯವಾದಗಳು..!! :)

   ಅಳಿಸಿ
 2. ಮಲ್ಲಿಕಾರ್ಜುನ್ ಚನ್ನಾಗಿದೆ ಮೇಳೈಸಿದ ಕಥೆ..ಮುಂದೇನು? ಕಾಯ್ತೇನೆ,,,

  ಪ್ರತ್ಯುತ್ತರಅಳಿಸಿ