ಆರಂಭಿಕ ಲೇಖನಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ: http://bisilubeladinagalahudugi.blogspot.com/2011/11/blog-post.html
ಒಂದಾನೊಂದು ಕಾಲದಲ್ಲಿ....!!
ವಿಜಯನಗರವೆಂಬ ಸಾಮ್ರಾಜ್ಯದಲ್ಲಿ..!!
ಹ್ಮ್ಮ್..!! ಹ್ಹ ಹ್ಹ ಯಾಕೋ ಇದು ಸ್ವಲ್ಪ ಅತಿಯಾಯ್ತು ಅನಿಸುತ್ತೇ ಅಲ್ವೇ,,??
ಬೇಡಬಿಡಿ..! ಅಷ್ಟು ಹಿಂದಕ್ಕೆ ಹೋಗೋದೇನೂ ಬೇಡ..!
ಸುಮಾರು 8 ವರ್ಷಗಳ ಹಿಂದೆ 'ವಿಜಯನಗರ' ಎಂಬ ನಗರದಲ್ಲಿ.
ಶಿವು ಎಂಬ ಯುವಕನಿದ್ದನು.!
ಸದ್ಯ ತನ್ನ ಇಬ್ಬರ ತಮ್ಮಂದಿರು., ತಂದೆ ತಾಯಿಯೊಂದಿಗೆ ..
ಕಷ್ಟಪಟ್ಟು Lease ಹಾಕಿಸಿಕೊಂಡಿರುವ ಮನೆಯಲ್ಲಿ ವಾಸವಾಗಿದ್ದನು...!
ಇದ್ದ ಒಬ್ಬ ಅಕ್ಕನನ್ನು ಅದಾಗಲೇ 'ಮದುವೆ' ಮಾಡಿಕೊಟ್ಟಾಗಿತ್ತು..!
ಅವರ ಮನೆಯವು 12 ಜನರ ತುಂಬು ಕುಟುಂಬವಾಗಿದ್ದರೂ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ಕಾರಣ ಕೆಲವರು ನಯವಾಗಿ ಜಾರಿಕೊಳ್ಳುತ್ತ ಕುಂಟುಂಬದಿಂದ ದೂರವಾಗುಳಿದಿದ್ದರು.
ಸದ್ಯಕ್ಕೀಗ ಮನೆಯಲ್ಲಿರುವುದೀ 5 ಜನ ಮಾತ್ರ.,
ತಂದೆಗೆ ಸ್ವಲ್ಪ ಅನಾರೋಗ್ಯದ ಕಾರಣ ಮನೆಯಲ್ಲೇ ಇರುತ್ತಿದ್ದರು.
ಅವರಿಗೆ ಬಿಸಿಲೆಂದರಾಗದು,,
ಇನ್ನು ತಾಯಿ ಮನೆಕೆಲಸ ಮಾಡುವದರಲ್ಲೇ ಸುಸ್ತಾಗಿರುತ್ತಾರೆ.!
ತಮ್ಮನೊಬ್ಬ ರೂ.೬೦೦ ರ ತಿಂಗಳ ಸಂಬಳಕ್ಕೆ ಅಂಗಡಿಕೆಲಸಕ್ಕೆ ಹೋಗುತ್ತಿದ್ದನು,
ಇನ್ನೊಬ್ಬ ತಮ್ಮನು ಸ್ವಲ್ಪ ಮಂದಬುದ್ದಿಯ ಕಾರಣ ಕೆಲಸಕ್ಕೆಲ್ಲೂ ಹೋಗದೇ ಮನೆಯಲ್ಲೇ ಸಣ್ಣಪುಟ್ಟ ಕೆಲಸಮಾಡಿಕೊಂಡು ಇರುತ್ತಿದ್ದನು..!
ಹಾಗಾಗಿ., ಮನೆಯ ಕುಟುಂಬದ ಸಂಪೂರ್ಣ ಹೊಣೆ ಈ 'ಶಿವು' ಮೇಲೆಯೇ..!
ಬಡತನಕ್ಕೆ ನೂರೆಂಟು ಕಷ್ಟ ಅನ್ನೋ ಹಾಗೆ, ಓದು ತಕ್ಕಮಟ್ಟಿಗೆ ನಡೆದಿತ್ತು,
'ಓದು ಒಕ್ಕಾಲು.. ಬುದ್ಧಿ ಮುಕ್ಕಾಲು' ಎನ್ನೋ ಸಿದ್ಧಾಂತವನ್ನು ನಂಬಿ ಯಾರಿಗೂ ತೊಂದರೆ ಕೊಡದೆ ಶಕ್ತಿ ಇರುವವರೆಗೂ ಓದಿ, ವ್ಯವಹಾರಕ್ಕೆ ನಿಂತಿದ್ದನು..
ತನ್ನ ತಂದೆಯವರ ಉದ್ಯೋಗವೇಯಾದ 'ಸರ್ಕಾರದ ಲಾಟರಿ ಟಿಕೇಟು ಮಾರಟ'ದ ಕೆಲಸವನ್ನೇ ಇವನು ಮುಂದುವರಿಸಿಕೊಂಡು ಹೊರಟಿದ್ದನು.!
ಬರೋ ಅಲ್ಪ-ಸ್ವಲ್ಪ ಆದಾಯದಲ್ಲೇ ತೃಪ್ತಿಯಿಂದ ಜೀವನ ನಡೆಸುತ್ತಿದ್ದನು,,
ಕನಸುಗಳು ನೂರಾರಿದ್ದರೂ,, ಎಲ್ಲವನ್ನೂ ಬದಿಗೊತ್ತಿ,, ಸಂಸಾರದ ನೊಗವನ್ನು ಹೊತ್ತು ಸಾಗಿದ್ದನು.
ತನ್ನ ಬುದ್ದಿಮತ್ತೆಯಿಂದ ತನ್ನ ವ್ಯವಹಾರದಲ್ಲಿ ಹಂತ-ಹಂತವಾಗಿ ಬೆಳೆಯುತ್ತ ಸಾಗಿದನು,

ಆ ಜಾಗಕ್ಕೆ ಹೊಂದುವಂತೆ ಒಂದು Table ಮಾಡಿಸಿ ಒಂದೊಳ್ಳೆ ದಿನ ಶುರು ಮಾಡಿಯೇಬಿಟ್ಟನು.(ರಾತ್ರಿಯಾದರೆ ಆ Table ಸಮೇತ ಮನೆಗೆ ಬರಬೇಕು)
ಆರಂಭದಲ್ಲಿ ವ್ಯಾಪಾರ ಅಷ್ಟಾಗಿ ನಡೆಯದಿದ್ದರೂ ಕಾಲ ಕ್ರಮೇಣ ವ್ಯಾಪಾರ ಕುದುರುತ ಬಂದಿತು.
ನಿಧಾನಕ್ಕೆ ಜನರೆಲ್ಲಾ ಇವನನ್ನು ಗುರುತಿಸುವಂತಾದರು.
ಇವನ ಮುಖಲಕ್ಷಣ.., ಮಾತಿನ ವೈಖರಿಯೇ ಹಾಗಿತ್ತು,
ಗ್ರಾಹಕರೆಲ್ಲಾ ಇವನ ಮುಖದ ಕಳೆ ನೋಡಿಯೇ ಬರ ಹತ್ತಿದ್ದರು,,
ನಿಷ್ಠೆಯಿಂದ ಕೆಲಸ ಮಾಡಿದರೆ ಯಾವುದೂ ಅಸಾಧ್ಯವಿಲ್ಲವೆಂಬಂತೆ.
ಇವನು ಮಾರಟ ಮಾಡುತ್ತಿದ್ದು ಟಿಕೇಟುಗಳಲ್ಲಿ ದೇವರ ಕೃಪೆಯಿಂದ ಆಗಾಗ 'ಬಹುಮಾನ'ಗಳೂ ಲಭಿಸತೊಡಗಿದವು..
ಗ್ರಾಹಕರೂ ಸಂತುಷ್ಟರಾಗಹತ್ತಿದರೂ,,
ಹೀಗೆ ಬಾಯಿಂದ ಬಾಯಿಗೆ ಹರಡಿ ಇವನ ಆ 'ಬೀದಿ ಬದಿಯ ಪುಟ್ಟ ಅಂಗಡಿ'
ತಕ್ಕಮಟ್ಟಿಗೆ ಹೆಸರು ಪಡೆಯಿತು.
ಇವನ ಸನ್ನಡತೆಯಿಂದಾಗಿ ಸುತ್ತಮುತ್ತಲಿನ ಜನರ ಆತ್ಮೀಯ ಸ್ನೇಹವನ್ನೂ., ವಿಶ್ವಾಸವನ್ನೂ ಸಂಪಾದಿಸಿದನು,
ಈಗ ಸ್ವಲ್ಪ ನೆಮ್ಮದಿಯ ಜೀವನ ಸಾಗ ಹತ್ತಿತು..
ಇಂತಿಪ್ಪ ಜೀವನ ಪಯಣ ಸಾಗಿರಲು ಇವನ ಕನಸುಗಳು ಗರಿಗೆದರತೊಡಗಿದವು,,
ತಾನೂ ಒಂದು ಮನೆಯನ್ನು ಕಟ್ಟಿಸಬೇಕು.., ಸಮಾಜದಲ್ಲಿ ಒಳ್ಳೆ ಸ್ಥಾನಮಾನಪಡೆಯಬೇಕು.., ಎಲ್ಲರೂ ಗೌರವಿಸುವಂತಾಗಬೇಕು..,
ಎಂದು ಆಸೆಯನ್ನು ಹೊತ್ತು
ಅದೇ ರೀತಿ ತನ್ನ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಜಾಗ್ರತೆಯಿಂದ ಹೆಜ್ಜೆ ಇಡಹತ್ತಿದನು..
ಮೊದಲ ಬಾರಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸಿ ಸ್ವಲ್ಪ ಹಣವನ್ನೂ ಉಳಿಸಹತ್ತಿದನು....! (ಬಹಳ ಏನೂ ಅಲ್ಲ ದಿನಕ್ಕೆ ರೂ.ಇಪ್ಪತ್ತರಂತೆ ಮಾತ್ರ)
"ಮಾತನಾಡುವುದೇ ಸಾಧನೆಯಾಗದೇ, ಸಾಧನೆಯೇ ಮಾತನಾಡಬೇಕೆಂದು" ನಿರ್ಧರಿಸಿ.
ಮಾತು ಕಡಿಮೆ ಕೆಲಸ ಹೆಚ್ಚು ಎಂಬಂತಾಯಿತು..
ಹೀಗೆ ಸಾಗಿರುವಾಗ ಇವನಿಗೆ ೨೦ ವರ್ಷಗಳು ತುಂಬಿದ್ದವು..
ಅಕ್ಕ-ಪಕ್ಕದ ಮನೆಯವರು ಇವನ ತಂದೆಗೆ "ಏನಪ್ಪಾ..!!?? ಇನ್ನೇನು ಹುಡುಗ ವಯಸ್ಸಿಗೆ ಬಂದ ಮದುವೆ ಮಾಡೋದಿಲ್ವೇನು..??" ಎಂದರು.
"ಅಯ್ಯೋ..!! ಈಗಿನ್ನೂ ವಯಸ್ಸು ಚಿಕ್ಕದು ಇನ್ನೂ ಸ್ವಲ್ಪ ದಿನ ಹೋಗಲಿ ಬಿಡಿ ನೋಡಿದರಾಯ್ತು" ಎಂದು ಉತ್ತರಿಸಿದರು ಇವನ ತಂದೆ.
ಅಲ್ಲಾ.. ಸ್ವಾಮಿ.., ನೀವು ಚೆಂದ ಹೇಳಿದ್ರಿ.. ಈಗ ನೋಡಿದ ಕೂಡಲೇ ಎಲ್ಲಾ ಆಗಿ ಹೋಗಿಬಿಡುತ್ತೇನು..,??
ನಮ್ಮ ಪ್ರಯತ್ನ ನಾವು ಮಾಡಬೇಕಲ್ಲವೇ..? ಈಗಿಂದ ಶುರು ಹಚ್ಚ್ಕೊಂಡ್ರೆ ಅಲ್ಲಿಗ್ ಬರುತ್ತೇ,, ಬೇಗ ಈಗಿಂದಲೇ ನೋಡೋಕ್ ಶುರುಮಾಡಿ ಎಂದರು.,
ಅದು ಸರಿನೇ.., ನೋಡೋಣ ಎಂದೇಳಿ ಮೌನವಾದರು ಶಿವು ತಂದೆ.
ಶಿವು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದನು,
ಊಟವಾದಮೇಲೆ ತಂದೆ ಇವನ ಬಳಿ ಬಂದು ಮದುವೆ ವಿಚಾರವನ್ನೆತ್ತಿದರು.
ಶಿವಣ್ಣಾ...! ಎಲ್ರೂ ಹೀಗ್ ಹೇಳ್ತಾ ಇದ್ದಾರೆ,, ಮದ್ವೆ ಆಗೋಕೆ ನೀ ಸಿದ್ಧನಾ ಎಂದರು..?
ಒಂದು ಕ್ಷಣ ಇವನು ಗಲಿಬಿಲಿ ಗೊಂಡನು ಇವನು ತಿಳಿದ ಪ್ರಕಾರ ಮದುವೆಗೆ ಗಂಡಿಗೆ 21 ಹೆಣ್ಣಿಗೆ 18 ತುಂಬಿರಬೇಕು, ಆದರೆ ನನಗಿನ್ನೂ 20 ನಡೀತಾ ಇದೆ. ಇದೇನು ಇವರು ಈಗಲೇ ಮದ್ವೇ ಬಗ್ಗೆ ಮಾತಾಡ್ತಾ ಇದಾರೆ,
ಇನ್ನೂ ನಾನೊಂದು ಹಂತಕ್ಕೆ ಬೆಳೆದಿಲ್ಲ.,
ಹೆಂಡತಿಯನ್ನು ನೋಡಿಕೊಳ್ಳವ ಸಾಮಾರ್ಥ್ಯ ನನಗೆ ಬಂದಿದೆಯೇ..?
ಏನೇ ಆಗಲಿ ಈಗಲೇ ಮದ್ವೇ ಆಗಬಾರದೆಂದು ಆಲೋಚಿಸಿ,,!
"ಏನು..?? ಇಷ್ಟು ಬೇಗನಾ..? ನಂಗಂತೂ ಈಗ್ಲೇ ಮದ್ವೇ ಬೇಡ"ವೆಂದು ಹೇಳಿದನು..!
"ಅಲ್ಲೋ.., ತಮ್ಮಾ.., ಈಗಲೇ ಅಂತಾ ಅಲ್ಲ ಈಗ್ಲಿಂದ ಹೆಣ್ಣು ನೋಡೋಕೆ ಶುರು ಮಾಡಿದ್ರೆ ಅಲ್ಲಿಗೆ ಬರುತ್ತೆ,, 2-3 ವರ್ಷ ಆಗಬಹುದು ಎಂದರು ತಂದೆ.
ಅದಕ್ಕವನು.. "ಅದೇನೋ ಸರಿಯಯ್ಯಾ..,(ಅಪ್ಪನಿಗೆ ಅಯ್ಯ ಅಂತಾರೆ) ಆದ್ರೆ ನೋಡಿದ ಕೂಡಲೇ ಅವರು ಒಪ್ಪಿಬಿಟ್ರೆ ಹಾಗೇನ್ ಮಾಡ್ತೀರಿ ಎಂದನು..?
ಏನೇ ಹೇಳಿ ನಾನಂತೂ ಈಗ್ಲೇ ಮದ್ವೆಗೆ ಒಪ್ಪಲ್ಲ" ಅಂದು ಬಿಟ್ಟನು..!
ಹೌದು..! ಅದೇನೋ ನಿಜಾನೇ ಎಂದರಿತು ಹೆಚ್ಚು ಒತ್ತಾಯ ಮಾಡದೇ ತಂದೆಯೂ ಸುಮ್ಮನಾಗಿಬಿಟ್ಟರು..!
![]() |
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ) |
ಹೌದಲ್ಲಾ..? ಮುಂದೆ ನಾನೂ ಮದ್ವೇಯಾಗೋನು..
ಹೇಗೆಲ್ಲಾ ಬಾಳಬೇಕು,, ಹೆಂಡತಿಯಾಗಿ ಬರೋಳ ಜೊತೆ ಹ್ಯಾಗೆಲ್ಲಾ ಇರಬೇಕು..?
ಈ ಮದುವೆ ಎಂದರೆ ಏನು..? ಯಾಕೆ..? ಅಂತೆಲ್ಲಾ ನೂರೆಂಟು ಯೋಚನೆಗಳನ್ನ ಮನದ ತುಂಬಾ ತುಂಬಿಕೊಂಡನು..!
ಮುಂದುವರಿಯುವುದು..............
ಇವತ್ತಿಗೆ ಇಷ್ಟು ಸಾಕಲ್ವ..? ಮತ್ತೆ ಸಿಗೋಣ...?
ಅಂದ ಹಾಗೆ ಮರೆತಿದ್ದೆ..! ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..! ಅಂದ್ರೇ Comment ಹಾಕೋದ್ ಮರೀಬ್ಯಾಡ್ರಿ ಅಂದೆ..! :)
ನಿಮ್ಮವ ♥ ♥
ಸವಿನೆನಪುಗಳು..!
ಶಿವು ಸಾಧನೆ ಇಷ್ಟವಾಯ್ತು...ಬಡತನ ಅನ್ನೋದು ಜೀವನ ಪಾಠ ಕಲಿಸುತ್ತೆ... ಅವನ ಹಸಿವೇ ದುಡಿಮೆಯಲ್ಲಿ ಒಳ್ಳೆ ಪ್ರತಿಫಲ ಸಿಗುವಂತೆ ಮಾಡಿದ್ದು...
ಪ್ರತ್ಯುತ್ತರಅಳಿಸಿಅಲ್ಲಾ...೨೦ಕ್ಕೆ ಮದ್ವೆನಾ..?ಅಥ್ವಾ..೨-೩ ವರ್ಷ ಆಚೆ ಅಂದ್ರು ೨೩ಕ್ಕೆ ಮದ್ವೆ ಬೇಗ ಅನಿಸತ್ತೋ ಏನೋ...?
ಅಲ್ಲಿ ತನಕ ಆರಾಮಾಗಿರೋಕೆ ಬಿಡಬಹುದೇನೋ ಹುಡ್ಗನ್ನ...!!
ಚೆನ್ನಾಗಿದೆ ಶಿವು ಕತೆ.. ಮೊದಲ ಭಾಗದಲ್ಲೇ ಕುತೂಹಲ ಇಟ್ಟಿದ್ದಿರಿ...
ನೋಡೋಣ ಮುಂದಿನ ಭಾಗದಲ್ಲಿ ಯುವಮನಸ್ಸಿನ ತಲ್ಲಣ ಹೇಗಿರುತ್ತೆ ಅಂತ.....
Good one...
ಶಿವುನ ಶ್ರಮ, ಶ್ರಧ್ಧೆ ಶ್ಲಾಗನೀಯ, ನಮ್ಮಂತ ಯುವಕರಿಗೆ ಪ್ರೇರೇಪಕ, ಈ ಭಾಗ ಬಹಳ ಇಷ್ಟ ಆಯಿತು. :)
ಪ್ರತ್ಯುತ್ತರಅಳಿಸಿಮೌನರಾಗ: ಬಡವರ ಬದುಕಿನ ಪಯಣವೇ ಹಾಗೇ..,
ಪ್ರತ್ಯುತ್ತರಅಳಿಸಿಹ್ಹ ಹ್ಹ ಹ್ಹ ಹ್ಹ 23 ಕ್ಕೆ ಮದುವೆ ಆದ್ರೂ ಬೇಗನಾ..?
ಅಲ್ರೀ ಹಾಗಾದ್ರೆ ಈ ಸರ್ಕಾರದವರು ಮಾಡಿರೋ 18-21 ಕಾನೂನು ತಪ್ಪೇನೋ ಹಾಗಿದ್ರೆ..?
ಧನ್ಯವಾದ ಪ್ರತಿಕ್ರಿಯೆಗೆ..! :)
surajbhaskerhegde: ನೀವು ಈ ಭಾಗ ತುಂಬಾ ಇಷ್ಟಪಟ್ಟಿದ್ದಕ್ಕೆ ಬಹಳ ಸಂತೋಷಿಸುತ್ತೇನೆ..!
ನಿಮ್ಮ ಮಾತುಗಳು ನನಗೆ ಇನ್ನೂ ಅತ್ಯುತ್ತಮವಾಗಿ ಸ್ಪೂರ್ತಿಯುತವಾಗಿ ಬರೆಯಲು ಪ್ರೇರಿಪಿಸುತ್ತುದೆ,,!
ಮುಂದೆಯೂ ಇಂಥಾ ಪ್ರಯತ್ನ ಮಾಡುವುದರಕಡೆ ಗಮನಹರಿಸುತ್ತೇನೆ..! :)
ಯಾವ ಭಾಗವನ್ನೂ ತಪ್ಪದೇ ಓದ್ತಾ ಇರಿ.. ಧನ್ಯವಾದಗಳು..! :)