ಹಿಂದಿನ ಭಾಗಕ್ಕಾಗಿ ಈ ಕೊಂಡಿ ಕ್ಲಿಕ್ಕಿಸಿ: http://bisilubeladinagalahudugi.blogspot.com/2011/12/blog-post.html
"ಅರಳಿದ ಕುಸುಮವು ಪರಿಮಳ ಬೀರುವಂತೆ..
ಅರಳಿದ ನವಿರುಭಾವಗಳು ಸುಮ್ಮನಿರುವವೇ..??
ಖಾಲಿ ಖಾಲಿ ಮನಸಿಗೆ ನೂರು ನೂರು ಕನಸುಗಳು
ತುಂಬಿಕೊಳ್ಳತೊಡಗುತ್ತವೆ..
ಆಗಲೇ ವಿಚಾರ ಲಹರಿವೂ ಅಲೆ-ಅಲೆಯಾಗಿ ಮನದ ದಡಕ್ಕೆ ಅಪ್ಪಳಿಸುತ್ತವೆ."
ಶಿವುನ ವಿಚಾರದಲ್ಲೂ ಹೀಗೆ ಆಯಿತು.. (ಆಗಲೇ ಬೇಕಲ್ಲ)
ಹಾಗೇ ಒಂದು ದಿನ ತನ್ನ ಮನಸಲ್ಲಿ ಆಲೋಚಿಸತೊಡಗಿದನು..
"ನನ್ನ 'ಬಾಳ ಸಂಗಾತಿ'ಯನ್ನು ನಾನು ಹೇಗೆ ಆಯ್ಕೆಮಾಡಿಕೊಳ್ಳಬೇಕು..??
'ಒಂದು ವೇಳೆ ನಾನು ಹುಡುಗಿ ನೋಡೋದಿಕ್ಕೆ ಅಂತಾ ಹೋದ್ರೆ,
ಅವಳು ನನ್ನ ಜೊತೆ ಹೇಗೆ ಹೊಂದಿಕೊಳ್ಳುತ್ತಾಳೋ ಏನೋ..??
ನನ್ನ ಹಾಗೇ ಸರಳವಾಗಿರದೇ ನನಗೆ ಅದು ಬೇಕು,
ಇದು ಬೇಕು ಎಂದು ಆಡಂಬರದ ಬದುಕು ಅವಳದಾದರೇನು ಮಾಡುವುದು..??
ಮೊದಲೇ ನಾನು 'ಬದುಕಲು ಢವ ಢವ ಎಂದು ಎದೆ ಹೊಡೆದುಕೊಳ್ಳುವಷ್ಟು
ಬಡವ' ದಿನನಿತ್ಯ ದುಡಿದರೇನೆ ಊಟ ನಮ್ಮದು ಅಂತಾದ್ರಲ್ಲಿ,
ನಾ ದುಡಿದ್ದದ್ದೆಲ್ಲಾ ಅವಳು ಹ್ಯಾಗ್ಯಾಗೋ ಖರ್ಚು ಮಾಡುವವಳಾದರೇನು
ಮಾಡುವುದು..???
ಆಗ ನನ್ನ ಜೀವನ ಸುಖಮಯವಾಗದೇ., ನರಕವಾಗಿಬಿಟ್ಟರೇ...??' :o
ಜೀವನದಲ್ಲಿ ಒಮ್ಮೆ ಮಾತ್ರ ಮದುವೆ ಆಗೋದು ಅದ್ಕೇ ನಿಧಾನಕ್ಕೆ,
ತಾಳ್ಮೆಯಿಂದ ಪರೀಕ್ಷಿಸಿ ಹೆಣ್ಣನ್ನು ಒಪ್ಪಿಕೊಳ್ಳಬೇಕೆಂದುಕೊಂಡನು..!"
ಆದ್ರೆ,, 'ಪರೀಕ್ಶಿಸುವ ವಿಧಾನಗಳು ಬೇಕಲ್ಲವೇ..? ಅವನ್ನೆಲ್ಲಿಂದ ಕಂಡುಹಿಡಿಯೋದು..?
ನೋಡೋಣ..!!' ಇನ್ನೂ ನಂಗೆ ವಯಸ್ಸು ಚಿಕ್ಕದು ಇನ್ನೂ 2-3 ವರ್ಷದೊಳಗೆ ಅದಕ್ಕೆಲ್ಲಾ ಉತ್ತರ ಕಂಡುಕೊಂಡರಾಯ್ತು ಎಂದು ಸುಮ್ಮನಾದನು..ಮನದಲ್ಲಿ ಆಲೋಚನೆ ಮೊಳಕೆಯೊಡೆದರೆ ಸುಮ್ಮನಿರುತ್ತದೆಯೇ..??
ಸುಪ್ತಮನಸು ಅದರ ಬಗ್ಗೆ ಸದಾ ಜಾಗೃತವಾಗೇ ಇರುತ್ತೇ.
ನಮ್ಮ ನಮ್ಮ ಕೆಲಸದಲ್ಲಿ ಮುಳುಗಿದ್ದರೂ ಅದು ಬಿಡದು...
ಮದುವೆಯಾಗೋ ಹುಡುಗಿಯ ಬಗೆಗಿನ ವಿಚಾರ
'ಮರಕುಟಿಗ'ನ ಹಾಗೇ ಸದಾ ಇವನ ತಲೆಯಲ್ಲಿ ಕೊರೀತಾನೇ ಇತ್ತು..

"ಕುಲ ನೋಡಿ ಹೆಣ್ಣು ತರಬೇಕು,, ಜಲ ಶೋಧಿಸಿ ನೀರು ತರಬೇಕು.."
"ಒಂದು ಒಳ್ಳೆ ಹೆಣ್ಣು ಹುಡುಕಬೇಕಾದ್ರೆ 3 ಜೋಡು ಮೆಟ್ಟು ಹರಿತ್ತಿದ್ವಂತೆ"
ಹೀಗೆ ಇಷ್ಟೊಂದು ಕಷ್ಟವೇ ಹೆಣ್ಣು ಹುಡುಕೋದು ಎಂದು ಆಶ್ಚರ್ಯಚಕಿತನಾಗಿದ್ದನು.
ಹೀಗಿರಲೊಂದು ದಿನ ಅವನು ಎಂದೋ ಓದಿದ ಒಂದು ಪುಸ್ತಕದಲ್ಲಿನ ಕಥೆ ನೆನಪಾಯ್ತು..!
ಆ ಕಥೆಯಲ್ಲಿ ಒಬ್ಬ ವ್ಯಕ್ತಿ ತನ್ನ ಮನೆ, ಕುಟುಂಬ ವನ್ನು ಸರಿಯಾಗಿ ನೋಡಿಕೊಳ್ಳುವ ವಧುವನ್ನು ಅರಸಿ.
ಒಂದು ಸೇರು ಭತ್ತವನ್ನ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡು ಕನ್ಯಾನ್ವೇಷಣೆಗಾಗಿ ಪ್ರಯಾಣ ಬೆಳೆಸುತ್ತಾನೆ..!
ಅವನು ಹೋಗುವ ಪ್ರತಿ ಮನೆಯಲ್ಲೂ ಅವನದು ಒಂದೇ ಷರತ್ತು..

ಈತ ಹೋದಕಡೆಯಲ್ಲೆಲ್ಲಾ ಎಲ್ಲಾ ಹೆಣ್ಣುಮಕ್ಕಳು 'ಅದಾಗದ ಮಾತೆಂದೇ' ಕಳಿಸಿಬಿಡುತ್ತಿದ್ದರು..!
ಕೆಲವು ಕಡೆ ಇವನೂ ಅಪಹಾಸ್ಯಕ್ಕೂ ಗುರಿಯಾದನು,.
"ಅಲ್ಲಾ..! ಬರೀ ಭತ್ತ ಕೊಟ್ಟು,, ಇವನು ತನ್ನ ಊಟಕ್ಕೆ ಬೇಕಾದ ಅನ್ನ , ಸಾರು,, ಪಲ್ಯ, ಮೊಸರು, ಎಲ್ಲಿಂದ ತರಬೇಕೆಪ್ಪಾ..? ಇವನಿಗೆ ಆ ಜನ್ಮದಲ್ಲಿ ಮದುವೆನೇ ಆಗಲ್ಲ" ಎಂದು ಗೇಲಿ ಮಾಡಿದರು..
ಆದರೂ ಇವನು ತನ್ನ ಪ್ರಯತ್ನ ಬಿಡಲಿಲ್ಲ,,
ಕೊನೆಗೆ ಒಂದು ಊರಲ್ಲಿ 'ಸುಮತಿ' ಎನ್ನೋ ಹುಡುಗಿ ಇವನ ಷರತ್ತುಗಳಿಗೆ ಒಪ್ಪಿ ಅಡುಗೆ ಮಾಡಿ ಬಡಿಸುವದಾಗಿ ಒಪ್ಪಿಕೊಂಡಳು, ಇವನಿಗೆ ಸಂತಸವಾಗಿ ಹುಡುಗಿಯ ತಂದೆಯ ಕೋರಿಕೆಯ ಮೇರೆಗೆ ಅವರ ಮನೆಗೆ ಹೋಗಿ ಮತ್ತೊಮ್ಮೆ ಆ ಹುಡುಗಿಗೆ ಎಲ್ಲವನ್ನೂ ವಿವರಿಸಿದನು, ಅವಳೂ ಅಷ್ಟೇ "ಸರಿ ನೀವು ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಂದು ಬಿಡಿ ಎಂದು ಹೇಳಿ ಅಡುಗೆ ಸಿದ್ಧತೆ ಮಾಡಲು ಹೋದಳು..!" ಇವನು ಹೊರಟು ಮಧ್ಯಾಹ್ನ ಸಮಯಕ್ಕೆ ಸರಿಯಾಗಿ ಊಟಕ್ಕೆ ಬಂದನು.

ಊಟವಾದ ಮೇಲೆ ಇವನು ಅವಳನ್ನು ಕೇಳುತ್ತಾನೆ,
ಅಲ್ಲಾ ರೀ ..! "ನಾನು ಎಷ್ಟೋ ಕಡೆ ಕೇಳಿದರೂ ಮಾಡೋಕೆ ಆಗೋದೆ ಇಲ್ಲ ಎಂದೇ ಎಲ್ರೂ ನನ್ನ ವಾಪಾಸು ಕಳಿಸಿದರು, ನೀವು ಇದನ್ನ ಹ್ಯಾಗೇ ಮಾಡಿದ್ರಿ" ಎಂದು ಕೇಳುತ್ತಾನೆ.
ಅದಕ್ಕೆ ಅವಳು ಹೇಳುತ್ತಾಳೆ "ನೀವು ಕೊಟ್ಟ ಭತ್ತವನ್ನು ಮೊದಲು ಕುಟ್ಟಿದೆನು. ಅದರಲ್ಲಿ ಅಕ್ಕಿ.., ನುಚ್ಚಕ್ಕಿ.., ತೌಡು (ಭತ್ತದ ಹೊಟ್ಟು) ಬಂದವು, ಅದನ್ನು ಚಪ್ಪರಿಸಿ, ಅಕ್ಕಿ ಮತ್ತು ನುಚ್ಚು, ಭತ್ತದ ತೌಡು ಬೇರೆ ಮಾಡಿದೆನು. ಅಕ್ಕಿನಾ ತೊಳೆದು ಅನ್ನಕ್ಕೆ ಇಟ್ಟೆ, ತೌಡು ತೆಗೆದುಕೊಂಡು ಹೋಗಿ ನಮ್ಮ ಪಕ್ಕದ ಮನೆಯ ಹಸುವಿಗೆ ಕೊಟ್ಟೆ ಆ ಮನೆಯವರು ಅದಕ್ಕೆ ಬದಲಾಗಿ ಮೊಸರನ್ನು ಕೊಟ್ಟರು. ಇನ್ನು ನುಚ್ಚು ಅದನ್ನು ನಮ್ಮ ಊರಿನ ಶೆಟ್ರು ಅಂಗಡಿ ಹೋಗಿ ಮಾರಿದೆ.
![]() |
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ) |
ಈಗ ಅವನಿಗೆ ತುಂಬಾ ಸಂತಸವಾಯಿತು,,! ಒಂದು ಪದಾರ್ಥವನ್ನು ಹಲವು ಮಾದರಿಯಲ್ಲಿ ಬಳಸಿ ಸ್ವಲ್ಪ ಕೂಡ ವ್ಯರ್ಥ ಮಾಡದೇ ಸರಿಯಾಗಿ ನಿಭಾಯಿಸಿದಳು ಇವಳು ತನ್ನ ಬದುಕನ್ನು ನಡೆಸಲು ಸಮರ್ಥಳೆಂದು ನಿರ್ಧರಿಸಿದನು
ಮುಂದೆ ಸರಳ ರೀತಿಯಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಅವರಿಬ್ಬರ ವಿವಾಹವೂ ಜರುಗುತ್ತದೆ..!"
ಅಬ್ಬಾಬ್ಬಬ್ಬಬ್ಬ್ಬ..!! ಮದುವೆಗೆ ಇಷ್ಟೆಲ್ಲಾ ದೊಡ್ಡ ಕಥೆ ಇದೇಯಾ ಅಂತಾ ಅನ್ಕೊಂಡು ಹಾಗೇ ನೆನಪಿನಿಂದ ವಾಸ್ತವಕ್ಕೆ ಬಂದ ಶಿವು ಮನಸಾರೆನಕ್ಕು ಬಿಟ್ಟನು..!:)
ಮುಂದುವರಿಯುವುದು.........
ನಿಮ್ಮ ಟೀಕೆ-ಟಿಪ್ಪಣೆ (Comment) ಹಾಕೋದ್ ಮರೀಯೋದಿಲ್ಲ ತಾನೇ..??
ಮತ್ತೆ...??? ಬೇಗ ನಿಮ್ಮ ಮನದಭಿಪ್ರಾಯವನ್ನಿಲ್ಲಿ ಮೂಡಿಸಿಬಿಡಿ..! :)
ಮತ್ತೆ ಭೇಟಿಯಾಗೋಣ...?ನಿಮ್ಮವ ♥ ♥
ಸವಿನೆನಪುಗಳು..!