ಹದಿಹರೆಯದ ವಯಸಿನಲ್ಲಿ ನವ ತಾರುಣ್ಯಕ್ಕೆ ಅಡಿಯಿಡುವ ಸಂದರ್ಭದಲ್ಲಿ,
ಪ್ರತಿಯೋರ್ವರು ಒಂದಿಲ್ಲೊಂದು ರೀತಿಯಲ್ಲಿ ಪ್ರೀತಿಯ ಸಿಂಚನವನ್ನು ಪಡೆದೇ ಇರುತ್ತಾರೆ.
ಒಬ್ಬೊಬ್ಬರದೂ ಒಂದೊಂದು ರೀತಿಯ ಪ್ರೇಮಕಥೆಯಾಗಿರುತ್ತದೆ.
ಕೆಲವು ಹೋಲಿಕೆಗಳಿರಬಹುದು,, ಇನ್ನೂ ಕೆಲವು ತುಂಬಾನೇ ವಿಭಿನ್ನವಾಗಿರುತ್ತವೆ.
ಏನೇ ಆದರೂ., ಅವರವರ ಪ್ರೇಮಕಥೆ ಅವರವರಿಗೆ ವಿಭಿನ್ನವಾಗೇ,, ಶ್ರೇಷ್ಠವಾಗೇ ಕಾಣಿಸುತ್ತದೆ,
ಒಂದು ಪ್ರೀತಿಯು ಹುಟ್ಟಬೇಕಾದರೆ ಅದಕ್ಕೆ ಹಲವಾರು ಕಾರಣಗಳಿರುತ್ತವೆ.
ಯಾವುದೋ ಒಂದು ಕಾರಣ ದಿಂದ.., ಯಾವುದೋ ಒಂದು ಸಂದರ್ಭದಲ್ಲಿ.., ಯಾವುದೋ ಒಂದು ಕ್ಷಣದಲ್ಲಿ..
ನಮಗರಿವಿಲ್ಲದೇ ನಮ್ಮ ಮನಸಲ್ಲಿ ಪ್ರೀತಿ ಮೊಳಕೆಯೊಡೆದು ಬಿಟ್ಟಿರುತ್ತದೆ, ,
ಅದು ಬೆಳೀತಾ.. ಬೆಳಿತಾ ಹಲವು ರೂಪಗಳಲ್ಲಿ ಅಭಿವ್ಯಕ್ತಿ ಗೊಳ್ಳುತ್ತಾ ಸಾಗುತ್ತದೆ.

ಹದಿಹರೆಯದ ವಯಸಿನಾಕರ್ಷಣೆಗರಳಿದ ಪ್ರೇಮ ಫಲಿಸುವುದು ತುಂಬಾ ವಿರಳವೇ ಅನಿಸುತ್ತೆ.
ಸ್ವಲ್ಪ ಪ್ರಬುದ್ಧತೆಯ ಹಂತದಲ್ಲಿ ಹುಟ್ಟಿದ ಪ್ರೇಮ ಫಲಿಸುವ ಸಾಧ್ಯತೆ ಹೆಚ್ಚಿದ್ದರೂ ಕಾರಣಾಂತರಗಳಿಂದ ಅದರಲ್ಲೂ ವಿಫಲತೆಯ ಅಂಶವನ್ನೂ ತಳ್ಳಿಹಾಕುವಂತಿಲ್ಲ..! ಆದರೂ.., ಪ್ರೀತಿ ಒಂದು ಮಾಯೆ ಎಂದುಕೊಳ್ಳುವವರೇ ಅತಿ ಹೆಚ್ಚು ಜನ,,!
ಇಷ್ಟಾದ್ರೂ ನನ್ನ ಒಂದು ಮಾತು ಅಂತೂ ಅಪ್ಪಟ ಸತ್ಯ
"ಕಣ್ಣಲ್ ಹುಟ್ಟೋ ಪ್ರೀತಿ 'ಕಣ್ಮರೆ'ಯಾಗೋತನಕ..,ಮನಸಲ್ಲ್ ಹುಟ್ಟೋ ಪ್ರೀತಿ 'ಹೃದಯದ ಬಡಿತ' ನಿಲ್ಲೋ ತನಕ" ♥ ♥
ಈ ಪ್ರೀತಿ-ಪ್ರೇಮಗಳಲ್ಲಿ ಸಿಲುಕಿದ ಪ್ರತಿಯೊಬ್ಬರೂ ಅದರ ಆಳ-ಅಗಲದ ಅನುಭವವೇನೆಂದು ಅರಿತಿರುತ್ತಾರೆ..
ಯಾರಾದರಾಗಲಿ ಈ ಪ್ರೀತಿಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೇ..
ಅದರಿಂದಾಚೆ ಬರುವುದು ಬಹು ಕಷ್ಟಸಾಧ್ಯವಾದ ಮಾತೇನೋ..?
ಪ್ರೀತಿಯ ಅಮಲಿನಲ್ಲಿರುವವರಿಗೆ ತಮ್ಮದೇ ಪ್ರೇಮಲೋಕ,,.
ಅಕ್ಕ-ಪಕ್ಕ., ಸುತ್ತ-ಮುತ್ತ.., ಯಾರಿಹರೆಂಬ ಪರಿವೇ ಇಲ್ಲದೇ
ತಮ್ಮದೇ ಕಲ್ಪನಾ ಕಲೋಕದಲ್ಲಿ ತೇಲಾಡುತ್ತಿರುತ್ತಾರೆ.. :)
ಊಟ.., ನಿದ್ರೆ.. ತಮ್ಮ ಕೆಲಸ..,ಇದಾವುದರ ಬಗೆಗೂ ಗಮನವಿರುವುದಿಲ್ಲ..
ಇನ್ನೂ ಹೆಚ್ಚೆಂದರೆ 'ಹಗಲು-ರಾತ್ರಿ'ಗಳಾದರೂ ಯಾವುದೆಂಬುದರರಿವು ಬಾರದೇ ಹೋಗಿಬಿಡುತ್ತದೆ..
ಏಕೆಂದರೆ.., ಪ್ರೀತಿಸುವ ಪ್ರೇಮಿಗಳಿಗೆ ಪ್ರತಿ ನಿತ್ಯ.. ಪ್ರತಿ ಕ್ಷಣ.., ಪ್ರೀತಿಸುತ್ತಿರುವವರದೇ ಧ್ಯಾನ..
"ಬಯಸಿದೊಲವು ಬಯಕೆಯಂತೆ ಜೊತೆಗೂಡಿ ಸಾಗಲು
ಪ್ರಜ್ವಲಿಸುವ ನೇಸರನ ಸುಡುಬಿಸಿಲಿನ ಕಿರಣಗಳೂ.,
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳಿದ್ದಂತೆ"
ಒಂದೊಮ್ಮೆ ಇದೇ ಪ್ರೀತಿ ಕೈಗೆ ಸಿಗದೇ 'ನಿಲುಕದ ನಕ್ಷತ್ರ'ದಂತಾದರೆ..??
"ಬಯಸಿದೊಲವು ಬಯಕೆಯಂತೆ ಜೊತೆ ಬಾರದಿರಲು
ಸದಾ ತಂಪನ್ನೀಯುವ 'ಪೂರ್ಣಚಂದ್ರ'ನ ತಂಪು ಬೆಳದಿಂಗಳೂ ಸಹ
'ಪ್ರೇಮಿಗಳ ಪ್ರೇಮದ ವಿರಹದುರಿಯ ಯಾತನೆಗೆ'
ಝಗಮಗಿಸುವ ಕಡು ಬೇಸಿಗೆಯ ರವಿತೇಜನ ಕಿರಣಗಳಂತೆ
ಮೈ-ಮನ ಸುಡುವ ಬಿಸಿಲಿನಂತಾಗುತ್ತದೆ"
![]() |
(ಇಲ್ಲಿನ ಎಲ್ಲಾ ಚಿತ್ರಗಳ ಕೃಪೆ Google ನಿಂದ) |
ಈ ಹೃದಯ ಆ ಹೃದಯಕ್ಕೇ ಮೀಸಲು ಎಂಬ ಭಾವನೆ ಮೂಡುವದಾದರೂ ಹೇಗೆ..??
ಎಷ್ಟೋ ಕೋಟಿ ಕೋಟಿ ಜನರಿರುವ ಜಗದಲ್ಲಿ ನಿರ್ಧಿಷ್ಟವಾದ ಆ ಎರಡು ಹೃದಯಗಳ ನಡುವಿನ ಆಂತರಿಕ ಸೆಳೆತವೇನು..??
ಎತ್ತಣ ಮಾಮರ..? ಎತ್ತಣ ಕೋಗಿಲೆ..? ಎಂಬ ಕವಿವಾಣಿಯಂತೆ ಇದಲ್ಲವೇ ಋಣಾನುಬಂಧ..??
ಇದೇ ಮಾದರಿಯಲ್ಲಿ ನನ್ನೀ ಕಥೆಯ ಎರಡು ಹೃದಯಗಳು ಹೇಗೆ ಸೇರುತ್ತವೆ..??
ಆ ಎರಡು 'ಹೃದಯಗಳ ಸಂಗಮ'ಕ್ಕೆ ನನ್ನೀ 'ಒಲವಿನಕ್ಷರಗಳ ಸೇತುವೆ' ಹೇಗಾಗುತ್ತೆ ಎಂಬುದ ಕಾದು ನೋಡಿ..!
ಓದಿ ಅನಂದಿಸಿ.., ಅನುಭವಿಸಿ.. ತಪ್ಪಿರಲಿ,, ಒಪ್ಪಿರಲಿ.. ನಿಮ್ಮ ಮನದಭಿಪ್ರಾಯವಿಲ್ಲಿ ತಪ್ಪದೇ ಮೂಡಿಬರಲಿ..
ಅಂದ ಹಾಗೆ ನಾನೀ ಕಥೆಯಲ್ಲಿ ಬಳಸುವ ವ್ಯಕ್ತಿಯ ಹೆಸರುಗಳಾಗಲಿ..,
ಕಥೆಯ ಸನ್ನಿವೇಶಗಳಾಗಲಿ.., ಕೇವಲ ಕಾಲ್ಪನಿಕ.
ಯಾರಿಗೂ.. ಯಾವುದಕ್ಕೂ ಸಂಬಂಧಪಟ್ಟಿರುವುದಿಲ್ಲ
ಹಾಗೊಂದು ವೇಳೆ ಹೋಲಿಕೆ ಕಂಡುಬಂದಲ್ಲಿ ಅದೊಂದು ಕಾಕತಾಳೀಯವಷ್ಟೇ. (Co Incidence)
ಮುಂದಿನ ಭಾಗದಲ್ಲಿ ಮತ್ತೆ ಸಿಗೋಣ.:) ಕಾಯ್ತಾ ಇರ್ತೀರಲ್ಲಾ..? ನಿಮ್ಮ Heart ಜೋಪಾನ..! ♥
ಪ್ರೋತ್ಸಾಹವಿರಲಿ..,
ನಿಮ್ಮವ ♥ ♥
ಸವಿನೆನಪುಗಳು..!!